ಬಂಟ್ವಾಳ: ತಾಲೂಕು ಮಂಚಿ ಗ್ರಾಮದ ತೀರಾ ಬಡವರಾದ ಮಂಚಿ ಸೈಟ್ ನಿವಾಸಿ ಇಂದಿರಾ ರವರ ಮನೆಗೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಇದರ ಉಪಸಮಿತಿ ಸದಸ್ಯ ಮಂಚಿ ಚಂದ್ರ ಇಲೆಕ್ಟ್ರಿಕಲ್ಸ್‍ನ ಚಂದ್ರಶೇಖರ್ ನಾಯಕ್ ಇವರು ಉಚಿತವಾಗಿ ನೀಡಿದ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ವಿಟ್ಲ ಉಪವಿಭಾಗ ಇದರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರವೀಣ ಜೋಶಿ ಉದ್ಘಾಟಿಸಿದರು.
ಮೆಸ್ಕಾಂ ಸಾಲೆತ್ತೂರು ಶಾಖೆಯ ಶಾಖಾಧಿಕಾರಿ ಸತೀಶ್, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ, ಪಂಚಾಯತ್ ಸದಸ್ಯ ಬದ್ರುದ್ದೀನ್, ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಸೆರ್ಕಳ, ಜಿಲ್ಲಾ ಸಮಿತಿ ಸದಸ್ಯ ಬಾಬು ಮೂಲ್ಯ, ಶೀಬಾ ಇಲೆಕ್ಟ್ರಿಕಲ್ಸ್‍ನ ಪಿ ಜೆ ಜಾನ್ಸನ್, ಶ್ರೀದೇವಿ ಇಲೆಕ್ಟ್ರಿಕಲ್ಸ್‍ನ ಕೇಶವ ಎಂ, ಸಾಲಿಯಾನ್ ಇಲೆಕ್ಟ್ರಿಕಲ್ಸ್‍ನ ಜಯಂತ ಸಾಲಿಯಾನ್, ರಮೀಝ್ ಇಲೆಕ್ಟ್ರಿಕಲ್ಸ್‍ನ ಮಹಮ್ಮದ್, ದುರ್ಗಾ ಪವರ್ ಸಿಸ್ಟಮ್ಸ್‍ನ ಗಣೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

