ಬಂಟ್ವಾಳ: 2016 ಮಾ.23ರಂದು ತುಂಬೆ ಡ್ಯಾಂ ಸಂತ್ರಸ್ತ ರೈತರನ್ನು ಮುಳುಗಡೆ ಪ್ರದೇಶವಾದ ಬಂಟ್ವಾಳ ತಾಲೂಕು ಸಜೀಪ ಗ್ರಾಮದ ಮಲಾಯಿಬೆಟ್ಟು ಪ್ರದೇಶದಲ್ಲಿ ಆಗಿನ ಡಿ.ಸಿ.ಎ.ಬಿ.ಇಬ್ರಾಹಿಂ ಅವರು ಜಿ.ಪಂ.ಸದಸ್ಯ, ಗ್ರಾ.ಪಂ.ಅಧ್ಯಕ್ಷ, ತಾ.ಪಂ.ಸದಸ್ಯ, ಮನಪಾ ಮೇಯರ್, ಮನಪಾ ಸದಸ್ಯರು, ಮನಪಾ ಅಧಿಕಾರಿ ವರ್ಗ, ತಹಶೀಲ್ದಾರ್ ಮೊದಲಾದವರ ಸಮ್ಮುಖದಲ್ಲಿ ಭೇಟಿ ಮಾಡಿ ಸಭೆ ನಡೆಸಿ 8ಮೀ. ಎತ್ತರಕ್ಕೆ ರೈತರ ಸಮಕ್ಷಮ ಸಭೆ ನಡೆಸಿ ರೈತರಿಗೆ ನ್ಯಾಯೋಚಿತ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದರು.
ಒಂದು ತಿಂಗಳ ಗಡುವು ಕೂಡ ನೀಡಿದ್ದರು.ಸೆ.3ರಂದು ಮನಪಾ ಲಿಖಿತವಾಗಿ 5 ಗ್ರಾಮಗಳ ಸಭೆ ನಡೆದಿದ್ದು 4(1),6(1) ಒಂದುವಾರದೊಳಗೆ ಗಡಿ ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು ಸೆ.16 ಮನಪಾ ಅಧಿಕಾರಿಗಳು, ತಾಲೂಕು ಸರ್ವೆಯವರು ತಹಶೀಲ್ದಾರ್ ಜಿ.ಪಂ.ಸದಸ್ಯರು ಬಂಟ್ವಾಳ ಐ.ಬಿ.ಯಲ್ಲಿ ರೈತರ ಸಭೆ ನಡೆಸಿ 10 ದಿನದೊಳಗೆ ಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದರು.
ಸೆ.22ರಂದು ಜಿ.ಪಂ.ಸಭಾಂಗಣದಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಖುಂಟಿ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ|ಕೆ.ಜಿ.ಜಗದೀಶ 7ಮೀ. ಎತ್ತರಕ್ಕೆ ಮುಳುಗಡೆ ಪ್ರದೇಶಕ್ಕೆ ಪರಿಹಾರ ಪಾವತಿಗೆ ಗಮನಸೆಳೆದಾಗ ನಗರಪಾಲಿಕೆ ಆಯುಕ್ತ ಮಹಮ್ಮದ್‍ನಝೀರ್ 7ಮೀ. ಎತ್ತರಕ್ಕೆ ನೀರು ನಿಂತಾಗ 450 ಎಕರೆ ಮುಳುಗಡೆಯಾಗಲಿದೆ ಎಂದು ತಿಳಿಸಿದಾಗ 5 ಮೀ.ನೀರು ನಿಲ್ಲಿಸಿ 56 ಎಕರೆ ಜಮೀನಿಗೆ ಸರಕಾರ ಅನುದಾನ ನೀಡಲು ಕ್ರಮ ಕೈಗೊಳ್ಳುವುದೆಂದು ಸರಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದರು.
ಮನಪಾ ಮೇಯರ್ ಮುಖ್ಯಮಂತ್ರಿಗೆ ಮನವಿ ಮಾಡಿ 6ಮೀ. ಎತ್ತರಕ್ಕೆ ನೀರು ಸಂಗ್ರಹಿಸಲು 285 ಎಕರೆ ಭೂ ಸ್ವಾಧೀನಕ್ಕೆ 250 ಕೋ.ರೂ.ಅನುದಾನ ಬೇಕೆಂಬುದಾಗಿ ತಿಳಿಸಿದ್ದು ,ಈ ಎಲ್ಲಾ ಮಾಹಿತಿಗಳಿಂದ ರೈತರು ಗೊಂದಲ ಹಾಗೂ ಆತಂಕಕ್ಕೀಡಾಗಿದ್ದು ಮುಳುಗಡೆಯ ಬಗ್ಗೆ ಖಚಿತ ಮಾಹಿತಿ ನೀಡಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮಾಡಿದರೂ ಈ ತನಕ ಉತ್ತರವಿಲ್ಲ.ಎಪ್ರಿಲ್ ಮೇ ತಿಂಗಳಲ್ಲಿ ಮಳೆ ಬಾರದೇ ಇದ್ದರೆ ನೀರಿನ ಅಭಾವ ನಿವಾರಿಸಲು 8ಮೀ.ನೀರು ಸಂಗ್ರಹವಾಗಬೇಕಾಗಿರುವುದರಿಂದ ಈ ಬಗ್ಗೆ ಕೂಡಲೇ ನಮ್ಮ ಜನಪ್ರತಿನಿ„ಗಳು ಹಾಗೂ ಆಡಳಿತ ರೈತರನ್ನು ವಿಶ್ವಾಸಕ್ಕಕೆ ತೆಗೆದುಕೊಂಡು ಭೂ ಪರಿಹಾರದ ಮಾನದಂಡ ಮುಳುಗಡೆಯ ಮಾಹಿತಿಯ ಸ್ಪಷ್ಟ ಚಿತ್ರಣ ರೈತರಿಗೆ ಒದಗಿಸಿ ರೈತರ ಹಿತಾಸಕ್ತಿ ಕಾಪಾಡಿ ಕೃಷಿಯನ್ನು ನಂಬಿ ಜೀವಿಸುವ ರೈತಾಪಿ ವರ್ಗದ 12 ವರ್ಷದ ಈ ಜ್ವಲಂತ ಸಮಸ್ಯೆ ಪರಿಹರಿಸಿ ಭರವಸೆಯನ್ನು ಉಳಿಸಬೇಕಾಗಿ ಎಂ.ಸುಬ್ರಹ್ಮಣ್ಯ ಭಟ್ ಅವರು ಮನವಿಯಲ್ಲಿ ತಿಳಿಸಿರುತ್ತಾರೆ.

