ಬದಿಯಡ್ಕ : ಸಹಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಬದಿಯಡ್ಕ ಇದರ ವತಿಯಿಂದ ಮಾಜಿ ರಾಷ್ಟ್ರಪತಿಯಾದ ಡಾ| ಎ.ಪಿ. ಜೆ ಅಬ್ದುಲ್ ಕಲಾಂ ಜನ್ಮ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

21

ಇದೇ ಸಂದರ್ಭದಲ್ಲಿ ಕಾಮರ್ಸ್ ವಿಭಾಹದ ವಿದ್ಯಾರ್ಥಿಗಳು ಆಯೋಜಿಸಿದ ಒಂದು ದಿನದ ಎನಿಗ್ಮಾ ಪೆಸ್ಟ್ -2016ನ್ನು ಅಡೂರು ಸರಕಾರಿ ಹೈಯರ್ ಸೆಕೆಂಡು ವಿಭಾಗದ ಕಾಮರ್ಸ್ ಅಧ್ಯಾಪಕರಾದ ಶ್ರೀ ಪ್ರವೀಣ್ ಕುಮಾರ್ ಕಾರಡ್ಕು ಉದ್ಘಾಟಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.

ಕಾಲೇಜು ಪ್ರಾಂಶುಪಾಲರಾದ ಶ್ರೀ ಶಿವದಾಸ್ ಸಿ.ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಹ-ಪ್ರಾಧ್ಯಾಪಕರಾದ ಶ್ರೀ ಚಂದ್ರಶೇಖರ್ ಏತಡ್ಕ ಮತ್ತು ಸ್ಟಾಪ್ ಸೆಕ್ರೆಟರಿ ಕುಮಾರಿ ಸುಪ್ರಿಯ ಏತಡ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅನಂತರ ಕಾಮರ್ಸ್ ವಿಭಾಗದ ವಿಧ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸೌಮ್ಯ ಸ್ವಾಗತಿಸಿ ವಿಜೇಶ್ ವಂದಿಸಿದರು. ರವೀಶ್ ಯಾದವ್ ಮಾನ್ಯ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *