ಕಾಸರಗೋಡು: ಕಣ್ಣೂರಿನಲ್ಲಿ ಅ.12 ರಂದು ಬೆಳಿಗ್ಗೆ 10.30ರ ಸುಮಾರಿಗೆ ಮತ್ತೊಂದು ರಾಜಕೀಯ ಹತ್ಯೆ ನಡೆದಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ. ಕಣ್ಣೂರಿನ ಪಿಣರಾಯಿ ಪೆಟ್ರೋಲ್ ಬಂಕ್ ಸಮೀಪ ಈ ದುಷ್ಕೃತ್ಯ ನಡೆದಿದ್ದು, ರಮಿತ್ ಕೊಲೆಗೀಡಲಾದ ಬಿಜೆಪಿ ಕಾರ್ಯಕರ್ತ.

1

ತಂಡವೊಂದು ರಮಿತ್ ರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಇರಿದು ಹತ್ಯೆಗೈದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. ಎರಡು ದಿನಗಳ ಹಿಂದೆ ಸಿಪಿಎಂ ಕಾರ್ಯಕರ್ತ ಮೋಹನ್ ಎಂಬವರನ್ನು ಕೂತುಪರಂಬದಲ್ಲಿ ಕೊಲೆ ನಡೆಸಲಾಗಿತ್ತು. ಇವರು ಪಿಣರಾಯಿ ನಿವಾಸಿಯಾಗಿದ್ದರು. ರಮಿತ್ ಹತ್ಯೆಯು ಸಿಪಿಎಂ ಕಾಯಕರ್ತರ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ.

By suddi9

Leave a Reply

Your email address will not be published. Required fields are marked *