ಬಂಟ್ವಾಳ: ರಾಮಾಯಣದ ಮೂಲಕ ವಾಲ್ಮೀಕಿ ನೀಡಿದ ಸಂದೇಶಗಳು ಸಾರ್ವಕಾಲಿಕ ಸತ್ಯವಾದುದು, ಆದರೆ ಅವುಗಳ ಪಾರಿಪಾಲನೆಯಾಗದೆ ಸಮಾಜ ಇನ್ನೂ ಪ್ರಗತಿಯತ್ತ ಸಾಗಿಲ್ಲ. ಮನಷ್ಯನಲ್ಲಿ ಹೃದಯ ಇದೆ, ಹೃದಯವಂತಿಕೆ ಇಲ್ಲ, ಸಧೃಢವಾದ ದೇಹ ಇದೆ ಆರೋಗ್ಯ ಇಲ್ಲ, ಸಮಾಜದ ವಿಷ ವರ್ತುಲದಲ್ಲಿ ಇಂದು ನಾವು ಬದುಕುತ್ತಿದ್ದೇವೆ ಎಂದು ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಹೇಳಿದರು.

dsc_0710

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ದೇಶದಲ್ಲಿ ನಗರ ಭಾಗದ ವಿದ್ಯಾವಂತರು ಅನಾಗರೀಕರಾಗಿ ವರ್ತಿಸುತ್ತಿದ್ದಾರೆ, ಗ್ರಾಮೀಣ ಭಾಗದ ಜನರು ಸಾಮಾರಸ್ಯದಿಂದ ಬದುಕುತ್ತಿದ್ದಾರೆ. ಈ ಕಾರಣಕ್ಕಾಗಿಯೇ ನಗರ ಹಾಗೂ ಗ್ರಾಮಗಳ ನಡುವೆ ಕಂದಕ ಏರ್ಪಟ್ಟಿದೆ ಎಂದು ವಿಷಾದ ವ್ಯಕ್ತ ಪಡಿಸಿದ ಅವರು ಜಾತಿ ಸಂಘಟನೆಗಳು ರಾಷ್ಟ್ರಕಟ್ಟುವ ಸಂಘಟನೆಗಳಾಗಬೇಕು ಎಂದು ಆಶಿಸಿದರು.

ಪುರಸಭಾದ್ಯಕ್ಷ ರಾಮಕೃಷ್ಣ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರಕಾರ ಶೋಷಿತ ಸಮುದಾಯದ ಜನರಿಗೆ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕಿದೆ ಎಂದರು.

ತಾ.ಪಂ.ಉಪಾದ್ಯಕ್ಷ ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜಾತಿ, ಪಂಥಗಳನ್ನು ಮೀರಿ ಬದುಕ ಬೇಕಿದೆ. ಎಷ್ಟೇ ಅಭಿವೃದ್ದಿಯ ಪಥದಲ್ಲಿ ನಡೆದರೂ ಮನುಷ್ಯನ ನಡುವೆ ಸೌಹಾರ್ದತೆ ಇಲ್ಲದೆ ಇದ್ದರೆ ಯಾವುದೇ ಪ್ರಯೋಜನವಿಲ್ಲ ಎಂದರು. ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್., ತಹಶೀಲ್ದಾರ್ ಪುರಂದರ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕಿ ವಿನಯಕುಮಾರಿ ಸ್ವಾಗತಿಸಿ, ಜೋಡುಮಾರ್ಗ ವಸತಿ ಶಾಲೆಯ ಮುಖ್ಯ ಶಿಕ್ಷಕ ಪ್ರಸಾದ್ ವಂದಿಸಿದರು, ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *