ಬಂಟ್ವಾಳ:  ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ತಡ್ಯಾಲುಗುಡ್ಡೆ ಎಂಬಲ್ಲಿ ಕೆರೆಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ ಆನಂದ ಮೂಲ್ಯ ಎಂಬವರ ಪತ್ನಿ ಬೇಬಿ (45) ಎಂದು ಗುರುತಿಸಲಾಗಿದೆ.images

ಕಳೆದ 15 ವರ್ಷಗಳ ಹಿಂದೆ ಇವರ ಪತಿ ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದ್ದು, ಇಬ್ಬರು ಪುತ್ರರು ಮಾತ್ರ ಇದ್ದಾರೆ. ಇಲ್ಲಿನ ಶಾಲೆಯೊಂದರಲ್ಲಿ ಅಕ್ಷರ ದಾಸೋಹ ಸಹಾಯಕಿಯಾಗಿ ದುಡಿಯುತ್ತಿದ್ದ ಇವರಿಗೆ ಕಳೆದ ಹಲವು ಸಮಯದಿಂದ ತಲೆನೋವು ಸಮಸ್ಯೆ ಹೊಂದಿದ್ದು, ಶನಿವಾರ ಬೆಳಿಗ್ಗೆ ಸ್ಥಳೀಯ ನಿವಾಸಿ ಅನಿಲ್ ಎಂಬವರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *