ಸುದ್ದಿ9 ಕೈಕಂಬ: ಮನುಷ್ಯನಿಗೆ ಬಾಧಿಸುತ್ತಿರುವ ಕಾಯಿಲೆಗಳನ್ನು ಪತ್ತೆಹಚ್ಚಲು ರಕ್ತಪರೀಕ್ಷೆ ಅಗತ್ಯ. ರಕ್ತಪರೀಕ್ಷೆಯ ನೂತನ ತಂತ್ರಜ್ಞಾನ ಕೈಕಂಬದಲ್ಲಿ ಅಳವಡಿಸಲಾಗಿದ್ದು ಇದರ ವರದಿ ಎರಡೇ ನಿಮಿಷದಲ್ಲಿ ಸಿಗುತ್ತದೆ. ಇಂಥಾ ಅತ್ಯಾಧುನಿಕ ರಕ್ತಪರೀಕ್ಷಾ ತಂತ್ರಜ್ಞಾನದಿಂದ ರೋಗಿಯ ಕಾಯಿಲೆಯನ್ನು ಸುಲಭವಾಗಿ ಪತ್ತೆಹಚ್ಚಲು ವೈದ್ಯರಿಗೆ ನೆರವಾಗುತ್ತದೆ ಎಂದು ಖ್ಯಾತ ವೈದ್ಯರಾದ ಡಾ| ಸುಂದರ್ ಭಟ್ ಕೈಕಂಬ ತಿಳಿಸಿದ್ದಾರೆ.
ಅವರು ಗುರುಪುರ ಕೈಕಂದಲ್ಲಿ ಗುರುವಾರ ಹಮ್ಮಿಕ್ಕೊಳ್ಳಲಾಗಿದ್ದ ಶಿಫಾ ಕ್ಲಿನಿಕಲ್ ಲ್ಯಾಬೊರೇಟರರಿಯ ರಕ್ತಪರೀಕ್ಷೆಯ ಅತ್ಯಾಧುನಿಕ ಉಪಕರಣ(ಹಿಮೋತೆರಪಿ ಫುಲ್ಲಿ ಅಟೋಮೇಟೆಡ್ ಅನಾಲಿಸಿಸ್) ಅಳವಡಿಕೆಯ ಸಮಾರಂಭದಂದು ಕಾರ್ಯಕ್ರಮ ಉದ್ಘಾಟಿಸಿ ಮಾತಾಡುತ್ತಿದ್ದರು.

ಈ ಉಪಕರಣದಿಂದ ಅಲರ್ಜಿ, ಇನ್ಪೆಕ್ಷನ್ಗಳಿದ್ದರೂ ಈ ಉಪಕರಣದಿಂದಾಗುವ ಸ್ಪಷ್ಟ ವರದಿಗಳು ರೋಗಿಗಳ ಕಾಯಿಲೆಯನ್ನು ಪ್ರಾರಂಭದ ಹಂತದಲ್ಲೇ ಕಂಡುಹಿಡಿಯಬಹುದು. ಅಲ್ಲದೆ ಖಾಯಿಲೆಯನ್ನು ಮೊದಲೇ ಗುರ್ತಿಸಿದರೆ ಚಿಕಿತ್ಸೆ ನೀಡಲೂ ಸುಲಭವಾಗುತ್ತದೆ. ಅಲ್ಲದೆ ರೋಗಿ ಅಧಿಕ ಖರ್ಚು ಮಾಡಬೇಕಾಗಿರುವುದಿಲ್ಲ. ರಕ್ತ ಹೀನತೆ, ಹಿಮೋಗ್ಲೋಬಿನ್ ಕೊರತೆಯ ಬಗ್ಗೆ ನಿಖರ ಮಾಹಿತಿ ಪಡೆಯಬಹುದು. ಈ ಉಪಕರಣವನ್ನು ನಗರದ ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ಅಳವಡಿಸಲಾಗಿತ್ತು. ಆದರೆ ಶಿಫಾ ಕ್ಲಿನಿಕ್ನವರು ಮೊದಲ ಬಾರಿಗೆ ಕೈಕಂಬದ ಜನತೆಗೆ ಈ ಉಪಕರಣವನ್ನು ಪರಿಚಯಿಸುವುದರಿಂದ ಈ ಭಾಗದ ಜನರು ಇದರ ಪ್ರಯೋಜನ ಪಡೆಯಬಹುದು. ಈ ಉಪಕರಣ ಕೇವಲ ಎರಡೇ ನಿಮಿಷದಲ್ಲಿ ಕಂಪ್ಯೂಟರೀಕೃತ ವರದಿಯನ್ನು ನೀಡಬಲ್ಲುದು ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಥೈರಾಯ್ಡ್ ಸಮಸ್ಯೆಯನ್ನೂ ಈ ಉಪಕರಣದಿಂದ ಕಂಡುಹಿಡಿಯಬಹುದಾಗಿದ್ದು, ಇದಕಾಗ್ಕಿ ಆರು ತಿಂಗಳಿಗೊಮ್ಮೆ ರಕ್ತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೆ ಮಧುಮೇಹದ ತಪಾಸಣೆಯನ್ನು 4 ತಿಂಗಳಿಗೊಮ್ಮೆ ಉಚಿತವಾಗಿ ಹಮ್ಮಿಕೊಳ್ಳುತ್ತಿರುವ ಶಿಫಾ ಕ್ಲಿನಕ್ ಲ್ಯಾಬೊರೆಟರಿಯ ವಿಜಯ ಅವರನ್ನು ಪ್ರಶಂಸಿಸಿದರು.
ವೇದಿಕೆಯಲ್ಲಿ ವೈದ್ಯರುಗಳಾದ ಡಾ| ಶ್ರೀದೇವಿ ಆರ್. ಭಟ್., ಡಾ| ಐ.ಜಿ. ಲೋಬೋ, ಡಾ| ರಮೇಶ್ ಮಲ್ಲಿ, ತಾ.ಪಂ ಸದಸ್ಯ ಜಾನ್ಸನ್ ಲೋಬೋ. ಬಿಜೇಶ್ ಶೆಟ್ಟಿ, ಸತ್ಯಸಾಯಿ ಟ್ರಾವೆಲ್ಸ್ ಮಾಲಕರಾದ ಶ್ರೀಧರ್ ಸುವರ್ಣ, ಹಾಗೂ ಬಶೀರ್,ಶಿಫಾ ಕ್ಲಿನಿಕ್ನ ವಿಜಯ ಶ್ರೀಧರ್ ಹಾಗೂ ಶಿಫಾ ಕ್ಲಿನಿಕ್ ನ ಸಹೋದ್ಯೊಗಿಗಳು ಉಪಸ್ಥಿತರಿದ್ದರು.








