ಚೆನ್ನೈ: ಎಐಎಡಿಎಂಕೆ ಪಕ್ಷ ಯಾವುದೇ ವದಂತಿಯನ್ನು ನಂಬಬೇಡಿ ಜಯಲಲಿತಾ ಚೆನ್ನಾಗಿದ್ದಾರೆಂದು ಟ್ವಿಟ್ಟರ್ ನಲ್ಲಿ ಜನರಲ್ಲಿ ಮನವಿ ಮಾಡಿದೆ. ಜಯಾ ಚೇತರಿಕೆ ಹಿನ್ನಲೆಯಲ್ಲಿ ಹೊಸ ಸಿಎಂ, ಡಿಸಿಎಂ ಆಲೋಚನೆ ಅಣ್ಣಾಡಿ ಎಂಕೆ ಕೈ ಬಿಟ್ಟಿದ್ದು, ಸದ್ಯದ ಬೆಳವಣಿಗೆಯಿಂದ ಪುರಚ್ಚಿ ತಲೈವಿ ಬೆಂಬಲಗರು ಸಡಗರದಲ್ಲಿದ್ದಾರೆ.

Chennai Metro Rail Project Phase-I Extension

ತಮಿಳುನಾಡು ಸಿಎಂ ಜಯಲಲಿತಾ ಬೆಂಬಲಿಗರಿಗೆ ಶುಭ ಸುದ್ದಿ ಅಪೋಲೋ ಆಸ್ಪತ್ರೆಯಿಂದ ಹೊರಬಿದ್ದಿದೆ. 18 ದಿನಗಳ ಬಳಿಕ ಕಣ್ತೆರೆದ ಎಂ.ಕೆ ಮುಖ್ಯಸ್ಥೆ ಜಯಲಲಿತಾ ಕೈ ಸನ್ನೆ ಮೂಲಕ ಮಾತನಾಡಲು ಯತ್ನಿಸಿದ್ದಾರೆ. ತನಗೇನಾಗಿದೆ ಎಂದು ಕ್ಷೀಣ ಸ್ವರದಲ್ಲಿ ಜಯಲಲಿತಾ ಮಾತನಾಡಲು ಪ್ರಯತ್ನ ಪಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.

ಲಂಡನ್ ವೈದ್ಯ ರಿಚರ್ಡ್ ಜಾನ್ ಬೀಲೆ, ದೆಹಲಿ ಏಮ್ಸ್ ವೈದ್ಯರ ತಂಡ ಜಯಲಲಿತಾಗೆ ಚಿಕಿತ್ಸೆ ನೀಡುತ್ತಿದ್ದು ಜಯಾ ಅವರ ರಕ್ತದೊತ್ತಡ , ಶುಗರ್ ಲೆವಲ್ ಸಾಮಾನ್ಯ ಸ್ಥಿತಿಯತ್ತ ಇದೆ ಎಂದು ಹೇಳಿವೆ.

ಸದ್ಯ ಅಪೋಲೋ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿರುವ ಜಯಲಲಿತಾ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡು ಬಂದರೆ ಮುಂದಿನ ವಾರ ಡಿಸ್ಚಾರ್ಜ್ ಆಗಲಿದ್ದಾರೆ. ಮೂಲಗಳ ಪ್ರಕಾರ ಈ ಮಾಹಿತಿ ಸಿಕ್ಕಿದರೂ ಜಯಾ ಆರೋಗ್ಯದ ಕುರಿತು ಅಧಿಕೃತ ಹೆಲ್ತ್ ಬುಲೆಟಿನ್ ಇನ್ನಷ್ಟೇ ಹೊರಬೀಳಲಿಕ್ಕಿದೆ.

ಭಾನುವಾರ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಆಸ್ಪತ್ರೆಗೆ ತೆರಳಿ ಮಾತನಾಡಿ, ಜಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಶೀಘ್ರದಲ್ಲೇ ಗುಣ ಮುಖರಾಗಲಿದ್ದಾರೆಂದು ಹೇಳಿದ್ದರು.

ಸೆ.22ರಂದು ಜಯಲಲಿತಾ ಜ್ವರ ಮತ್ತು ನಿರ್ಜಲಿಕರಣದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ವೈದ್ಯರು ವೈದ್ಯಕೀಯ ವರದಿ ಬಿಡುಗಡೆ ಮಾಡುವ ಮೂಲಕ ಮಾಹಿತಿ ನೀಡುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *