ಬಜಪೆ: ಸುಂಕದಕಟ್ಟೆಯ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಆಶ್ರಯದಲ್ಲಿ ಯಕ್ಷಮಿತ್ರರು ಸುಂಕದಕಟ್ಟೆ ಇವರ ಸಂಯೋಜನೆಯಲ್ಲಿ ದೇವಳದ ಆಡಳಿತ ಮಂಡಳಿ, ಕ್ಷೇತ್ರದ ಭಕ್ತವೃಂದ ಹಾಗೂ ಶ್ರೀ ನಿರಂಜನ ಸ್ವಾಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಇಲ್ಲಿನ ಸಭಾಂಗಣದಲ್ಲಿ *ಬೊಲ್ಪುದ ಪರ್ಬ-2016* ಸಂಭ್ರಮದ ಸಮಾರಂಭ ಅ.23 ಭಾನುವಾರ ಸಂಜೆ 4ರಿಂದ ಸಂಪನ್ನಗೊಳ್ಳಲಿದೆ.

                                                                                                   ಸಾಂಧರ್ಬಿಕ ಚಿತ್ರ

24btl-2

ಅ.18 ನೋಂದಣಿಗೆ ಕೊನೆಯ ದಿನ:
ಇದೇ ಸಂಧರ್ಭ ಸಾರ್ವಜನಿಕರಿಗೆ ಮುಕ್ತ ಗೂಡುದೀಪ ಹಗೂ ರಂಗೋಲಿ ಸ್ಪರ್ಧೆ ನಡೆಯಲಿದ್ದು ಸ್ಪರ್ಧೆಯಲ್ಲಿ ಭಾಗವಹಿಸುವವರು ಅ.18 ಮಂಗಳವಾರದ ಒಳಗೆ ಹೆಸರು ನೋಂದಾಯಿಸಬೇಕಾಗಿದೆ.

ರಂಗೋಲಿ ಹಾಗೂ ಗೂಡುದೀಪ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ತಮ್ಮ ಗೂಡುದೀಪಗಳೊಂದಿಗೆ ಸ್ಪರ್ಧೆಯ ದಿನ ಸಂಜೆ 4 ಗಂಟೆಯೊಳಗೆ ಹಾಜರಾಗಿ ನೋಂದಣಿ ಮಾಡಿಸಬೇಕು. ಕಡಿಮೆ ಖರ್ಚಿನ ಉತ್ತಮ ಕಲಾಕೃತಿಯ ಅಷ್ಟ ಪಟ್ಟಿಯ ಗೂಡುದೀಪಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಇದೇ ಸಂಧರ್ಭ ಜನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸುಕುಮಾರ್ ಇವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು *ಬೊಲ್ಪುದ ಪರ್ಬ*ದ ಬಗ್ಗೆ ಉಪನ್ಯಾಸಗೈಯಲ್ಲಿದ್ದಾರೆ.

ಸಮಾರಂಭದುದ್ದಕ್ಕೂ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಸ್ಪರ್ಧಾಳುಗಳನ್ನು ಪ್ರಮಾಣ ಪತ್ರ, ಸ್ಮರಣಿಕೆಯೊಂದಿಗೆ ಗೌರವಿಸಲಾಗುವುದು. ಅಲ್ಲದೆ ಹಿರಿಯ ಸಾಧಕರು ಹಾಗೂ ಕಲಾಪ್ರೇಕ್ಷಕರನ್ನು ಗೌರವಿಸಲಾಗುವುದು ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *