ಬಂಟ್ವಾಳ : ಗಾಂಧೀಜಿಯವರು ಸ್ವತಃ ಒಬ್ಬ ವಕೀಲರಾಗಿ ನ್ಯಾಯಕ್ಕಾಗಿ ಶಾಂತಿಯುತ ಹೋರಾಟ ಮಾಡಿದವರು ಇಂತಹ ಸಂದರ್ಭದಲ್ಲಿ ವಕೀಲನಾದ ನನ್ನನ್ನು ಕರೆದು ಅರ್ಥಪೂರ್ಣ ಕೆಲಸ ಮಾಡಿರುತ್ತೀರಿ ಎಂದು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ವೆಂಕಟ್ರಮಣ ಶೆಣೈ ಎಸ್.ಕೆ.ಪಿ.ಎ. ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.

ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ ಇದರ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬಿ.ಸಿ.ರೋಡ್ ನ ಸಮಾಜ ಕಲ್ಯಾಣ ಇಲಾಖೆಯ ಸರಕಾರಿ ಆಶ್ರಮ ವಸತಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಾತ್ಮ ಗಾಂಧೀಜಿಯವರಿಗೆ ಮಕ್ಕಳ ಬಗ್ಗೆ ಹೆಚ್ಚು ಪ್ರೀತಿ ಇದ್ದ ಕಾರಣ ನಾವು ಇಲ್ಲಿನ ಮಕ್ಕಳೊಂದಿಗೆ ನಮ್ಮನ್ನು ತೊಡಗಿಸಿ ವಿವಿಧ ಕಾರ್ಯಕ್ರಮವನ್ನು ಮಾಡಲು ಸಹಕರಿಸಿದ ಆಶ್ರಮ ಮೇಲ್ವಿಚಾರಕರಿಗೆ ಅಭಿನಂದನೆ ಸಲ್ಲಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷ ಆನಂದ್, ಆಶ್ರಮ ಮೇಲ್ವಿಚಾರಕ ಪ್ರಸಾದ್, ಕೋಶಾಧಿಕಾರಿ ರವಿಪ್ರಕಾಶ್, ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹರೀಶ್ ಕುಂದರ್ ಸ್ವಾಗತಿಸಿದರು. ಉಪಾಧ್ಯಕ್ಷ ರಾಜೇಂದ್ರ ವಂದಿಸಿ, ದಯಾನಂದ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
