Swami Pradiptanand
ಫೋಂಡಾ (ಗೋವಾ):  ದೇಶದಲ್ಲಿ ಇತ್ತೀಚೆಗೆ ನಡೆದ ಅಧಿಕಾರಹಸ್ತಾಂತರವು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿದೆ ಎಂಬ ವಿಚಾರವನ್ನು ಇಟ್ಟುಕೊಳ್ಳುವುದು ಭ್ರಮೆಯಾಗಿದೆ. ಏಕೆಂದರೆ ಭಾಜಪವು ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಸ್ವಾ.ಸಾವರಕರರನ್ನು ದೂರವಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂತಾನವಾಗಿರುವುದರಿಂದ ಅದು ಹಿಂದೂ ರಾಷ್ಟ್ರದ ಕಾರ್ಯವನ್ನು ಮಾಡುವುದು ಅಸಾಧ್ಯವಾಗಿದೆ. ಕ್ರಿ.ಶ. 700 ರಲ್ಲಿ ಪ್ರಾರಂಭವಾದ ಹಿಂದೂಗಳ ಸ್ವಾತಂತ್ರ್ಯ ಹೋರಾಟವು ಇಂದಿಗೂ ಮುಗಿದಿಲ್ಲ. ನಮ್ಮ ಮಾನಮಾರ್ಯಾದೆಯ ಮತ್ತು ಗೌರವಚಿಹ್ನೆಗಳ ರಕ್ಷಣೆಗಾಗಿ ಹಿಂದೂಗಳು ಪೂರ್ವಜರ ಅದಮ್ಯ ಇಚ್ಛಾಶಕ್ತಿಯಿಂದ ಮತ್ತು ಅತುಲನೀಯ ಪರಾಕ್ರಮದಿಂದ ಮತ್ತೊಮ್ಮೆ ಹೊಸದಾಗಿ ಸ್ವಾತಂತ್ರ್ಯ ಹೋರಾಟ ನಡೆಸುವ ಸಮಯವು ಈಗ ಬಂದಿದೆ. ಚುನಾವಣೆಯ ಮೂಲಕ ಹಿಂದೂ ರಾಷ್ಟ್ರ ಸ್ಥಾಪನೆಯಾಗದೇ ಅದನ್ನು ಹೋರಾಡಿಯೇ ಸ್ಥಾಪಿಸಬೇಕಾಗಿದೆ. ಹಾಗಾಗಿಯೇ ಹಿಂದೂ ಸಂಪ್ರದಾಯಗಳು ಮತ್ತು ಸಂಘಟನೆಗಳು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅರ್ಥಾತ್ ಎರಡನೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಈಗ ರಣಕಹಳೆಯನ್ನು ಊದಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಪೂ.(ಡಾ.) ಚಾರುದತ್ತ ಪಿಂಗಳೆಯವರು ಇಲ್ಲಿ ಮಾರ್ಗದರ್ಶನ ಮಾಡಿದರು.
hindu adhiveshan
hindu adhiveshan

 

hindu adhiveshan
hindu adhiveshan

 

Nil Madhav Das
Nil Madhav Das
PP Eshwarbuva Ramdasi
PP Eshwarbuva Ramdasi

 

Pingalekaka. c
Pingalekaka. c
Swami Pradiptanand
Swami Pradiptanand

 

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಫೋಂಡಾ, ಗೋವಾದಲ್ಲಿನ ರಾಮನಾಥ ದೇವಸ್ಥಾನದಲ್ಲಿ ಆಯೋಜಿಸಲಾದ ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ವ್ಯಾಸಪೀಠದಲ್ಲಿ ಭಾರತ ಸೇವಾಶ್ರಮ ಸಂಘದ ಬಂಗಾಲ ಮತ್ತು ಝಾರ್ಖಂಡ ರಾಜ್ಯಗಳ ಪ್ರಮುಖ ಸ್ವಾಮಿ ಪ್ರದೀಪ್ತಾನಂದ ಮಹಾರಾಜರು, ಸಾಂಗ್ಲಿ (ಮಹಾರಾಷ್ಟ್ರ) ದ ಪ.ಪೂ.ಈಶ್ವರಬುವಾ ರಾಮದಾಸಿ, ಗೋರಕ್ಷಣೆಗಾಗಿ ಕಾರ್ಯ ಮಾಡುವ ಖಂಡವಾ (ಮಧ್ಯಪ್ರದೇಶ)ದಲ್ಲಿನ ೧೦೫ ಪ್ರಯತ್ನಸಾಗರಜೀ ಮಹಾರಾಜರು, ಝಾರ್ಖಂಡ ತರುಣ ಹಿಂದೂ ಸಂಘಟನೆಯ ಶ್ರೀ.ನೀಲ ಮಾಧವ ದಾಸ ಮತ್ತು ಸುದರ್ಶನ ಈ ರಾಷ್ಟ್ರೀಯ ಹಿಂದಿ ವಾರ್ತಾವಾಹಿನಿಯ ಸಂಚಾಲಕ ಶ್ರೀ.ಸುರೇಶ ಚಹ್ವಾಣಕೆ ಈ ಗಣ್ಯರು ಉಪಸ್ಥಿತರಿದ್ದರು. ಈ ಪ್ರಸಂಗದಲ್ಲಿ ಭಾರತದಲ್ಲಿನ ೨೦ ರಾಜ್ಯಗಳ ಸಹಿತ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳ ೧೨೫ ಕ್ಕಿಂತಲೂ ಅಧಿಕ ಹಿಂದೂ ಸಂಘಟನೆಗಳ ೩೭೫ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇವರೆಲ್ಲರೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಮೂರ್ತರೂಪ ನೀಡಲು ಕಟಿಬದ್ಧರಾಗುವ ದೃಢನಿರ್ಧಾರ ಮಾಡಿದರು. ಜೂನ್ ೨೦ ರಂದು ಪ್ರಾರಂಭವಾಗಿರುವ ಈ ಅಧಿವೇಶನವು ಜೂನ್ ೨೬ ತನಕ ನಡೆಯಲಿದೆ.
ಶಂಖನಾದ ಮತ್ತು ವೇದಮಂತ್ರ ಪಠಣದಿಂದ ಈ ಅಧಿವೇಶನವು ಪ್ರಾರಂಭವಾಯಿತು. ಉಪಸ್ಥಿತ ಸಂತರು ಮತ್ತು ಗಣ್ಯರ ಹಸ್ತದಿಂದ ಸನಾತನ ನಿರ್ಮಿತ ಗೀತಾ-ದರ್ಶನ ಮತ್ತು ಬಾಲಸಂಸ್ಕಾರ ಗ್ರಂಥಮಾಲಿಕೆಯ ಬೋಧಕಥಾ ಎಂಬ ಹೊಸ ಗ್ರಂಥಗಳ ಪ್ರಕಾಶನಗೊಳಿಸಲಾಯಿತು. ಹಾಗೆಯೇ ಮೂರು ಆಂಗ್ಲ ಗ್ರಂಥಗಳ ಪ್ರಕಾಶನ ಮಾಡಲಾಯಿತು.
೧೦೫ ಪ್ರಯತ್ನಸಾಗರಜೀ ಮಹಾರಾಜರು ಈ ಸಮಯದಲ್ಲಿ ಗೋರಕ್ಷಣೆಗಾಗಿ ಕರೆ ಕೊಡುತ್ತಾ, ಪ್ರತಿಯೊಬ್ಬ ವ್ಯಕ್ತಿಯು ಒಂದು ಆಕಳಿಗಾದರೂ ಮೇವು ನೀಡಬೇಕು ಹಾಗೂ ಶ್ರೀಮಂತರು ಅನೇಕ ಆಕಳುಗಳ ಗೋಶಾಲೆಗಳನ್ನು ನಡೆಸಬೇಕು ಎಂದು ಹೇಳಿದರು. ಇಲ್ಲಿ ನೀಡಲಾಗುವ ಮಾರ್ಗದರ್ಶನ ಮತ್ತು ಸಿಗುವ ಜ್ಞಾನವು ಕೇವಲ ಕೇಳಲಿಕ್ಕಾಗಿರದೇ ಕೃತಿಯಲ್ಲಿ ತರುವ ಅವಶ್ಯಕತೆಯಿದೆ, ಎಂದೂ ಅವರು ಕರೆ ನೀಡಿದರು.
ಪ.ಪೂ.ಈಶ್ವರಬುವಾ ರಾಮದಾಸೀ ಇವರು ತಪಶ್ಚರ್ಯೆಯ ಮಹತ್ವವನ್ನು ವಿಶದೀಕರಿಸಿದರು. ತಪಶ್ಚರ್ಯ ಮಾಡಿದುದರಿಂದಲೇ ಪಾಂಡವರು ವಿಜಯಿಗಳಾದರು. ಅದೇರೀತಿ ಧರ್ಮಕಾರ್ಯ ಮಾಡುವವರೂ ತಪಶ್ಚರ್ಯೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಸ್ವಾಮಿ ಪ್ರದೀಪ್ತಾನಂದರು, ಮುಸಲ್ಮಾನರು ಭಾರತವನ್ನು ಹಿಂದೂಸ್ಥಾನವೆನ್ನುತ್ತಾರೆ. ಆದರೆ ಸ್ವತಃ ಭಾರತೀಯರು ದೇಶವನ್ನು ಇಂಡಿಯಾ ಅಥವಾ ಭಾರತ ಎನ್ನುತ್ತಾರೆ. ಹಿಂದೂಗಳು ಹಿಂದೂಸ್ಥಾನವೆಂದೇ ಹೇಳಬೇಕು. ಕೃಷ್ಣನು ಪಾಂಡವರಿಗೆ ಯುದ್ಧಕ್ಕಾಗಿ ಕೃತಿಪ್ರವೃತ್ತರಾಗಲು ಮಾರ್ಗದರ್ಶನ ಮಾಡಿದ್ದನು. ಸ್ವತಃ ಕೃಷ್ಣನು ರಾಕ್ಷಸರ ಸಂಹಾರ ಮಾಡಿದ್ದನು. ಹಿಂದೂಗಳ ಪ್ರತಿಯೊಂದು ದೇವದೇವಿಯರ ಕೈಗಳಲ್ಲಿ ಶಸ್ತ್ರಗಳಿವೆ. ಸ್ವಾಮಿ ವಿವೇಕಾನಂದರು ಬ್ರಹ್ಮತೇಜ ಸಹಿತ ಹಿಂದೂಗಳನ್ನು ಕ್ಷಾತ್ರತೇಜಕ್ಕಾಗಿ ಕರೆ ನೀಡಿದ್ದರು. ನಾವೆಲ್ಲರೂ ಅವರ ಆದರ್ಶವನ್ನು ಪಡೆದು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ಶ್ರೀ.ನೀಲ ಮಾಧವ ದಾಸ ಇವರು, ಭಾರತದಲ್ಲಿ ಜಾತ್ಯತೀತವಾದದ ಹೆಸರಿನಲ್ಲಿ ಹಿಂದೂಗಳಿಗೆ ಹಿಂಸೆ ಮತ್ತು ಮುಸಲ್ಮಾನರ ಓಲೈಕೆ ಮಾಡಲಾಗುತ್ತಿರುವುದರ ಉದಾಹರಣೆಗಳನ್ನು ನೀಡಿ ಸ್ಪಷ್ಟೀಕರಿಸಿದರು. ಇಡೀ ಜಗತ್ತಿಗೆ ಮುಸಲ್ಮಾನ ಇದೊಂದು ಸಮಸ್ಯೆಯಾಗಿರುವಾಗ ಭಾರತದಲ್ಲಿ ಮಾತ್ರ ತಥಾಕಥಿತ ಜಾತ್ಯತೀತವಾದಿ ರಾಜಕಾರಣಿಗಳಿಗೆ ಮುಸಲ್ಮಾನ ಇದೊಂದು ಸಂಪತ್ತಿಯಾಗಿದೆ. ಅದರ ಮೂಲಕ ಅವು ತಮ್ಮ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದು ಇದರಿಂದ ಹೊರಬರಲು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸಬೇಕಾಗಿದೆ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ವಿನಾಯಕ ಶ್ಯಾನಬಾಗ್ ಹಾಗೂ ಶ್ರೀ.ಅಭಿಜಿತ್ ದೇಶಮುಖ ಇವರು ಕಾರ್ಯಕ್ರಮದ ಸೂತ್ರಸಂಚಾಲನೆಯನ್ನು ಮಾಡಿದರು.

ಹಿಂದೂಗಳ ಮೇಲಿನ ಆಘಾತಗಳ ವಿರುದ್ಧ ಸಮಾನ ಕೃತಿ ಕಾರ್ಯಕ್ರಮ ನಿಶ್ಚಿತವಾಗಲಿರುವುದು

೭ ದಿನ ನಡೆಯಲಿರುವ ಈ ಅಧಿವೇಶನದಲ್ಲಿ ಬಾಂಗ್ಲಾದೇಶಿ ನುಸುಳುವಿಕೆ, ಮತಾಂತರ, ಗೋಹತ್ಯೆ, ಲವ್ ಜಿಹಾದ್, ಸಂಸ್ಕ ತಿ ರಕ್ಷಣೆ, ಮಂದಿರರಕ್ಷಣೆ, ಹಿಂದೂಗಳಲ್ಲಿ ಧರ್ಮಜಾಗೃತಿ, ಜಗತ್ತಿನಾದ್ಯಂತ ಹಿಂದೂ ಧರ್ಮದ ಪ್ರಸಾರ, ವಿದೇಶಗಳಲ್ಲಿರುವ ಹಿಂದೂಗಳ ರಕ್ಷಣೆ ಹೀಗೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿದ್ದು, ಆ ಸಮಸ್ಯೆಗಳ ನಿವಾರಣೆಗಾಗಿ ಸಮಾನ ಕೃತಿ ಕಾರ್ಯಕ್ರಮವನ್ನು ಕೂಡ ನಿರ್ಧರಿಸಲಿದೆ.

ಗಮನಾರ್ಹ ಅಂಶಗಳು

೧. ಸ್ವಾಮಿ ಪ್ರದೀಪ್ತಾನಂದ ಮಹಾರಾಜರ ಶುಭಹಸ್ತದಿಂದ ಅಧ್ಯಾತ್ಮ ವಿಶ್ವವಿದ್ಯಾಲಯದ www.spiritual-university.org ಈ ಜಾಲತಾಣವನ್ನು ಲೋಕಾರ್ಪಣೆ ಮಾಡಲಾಯಿತು
೨. ಈ ಅಧಿವೇಶನದ ನೇರ ಪ್ರಸಾರವನ್ನು ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣದ  www.hindujagruti.org/summit/english.php ಈ ಸಂಪರ್ಕಕೊಂಡಿಯಿಂದ ಮಾಡಲಾಗುತ್ತದೆ.
೨. ಹಿಂದೂ ಅಧಿವೇಶನಕ್ಕಾಗಿ ಪೂರ್ವಾಮ್ನಾಯ ಶ್ರೀಗೋವರ್ಧನಮಠ-ಪುರಿಪೀಠಾಧೀಶ್ವರ ಶ್ರೀಮದಜ್ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ, ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ, ಕಲ್ಯಾಣದ ಯೋಗತಜ್ಞ ಪ.ಪೂ.ದಾದಾಜಿ ವೈಶಂಪಾಯನ, ಪುಣೆಯ ಸಂತ ಪ.ಪೂ. ಶ್ರೀಕೃಷ್ಣ ಕರ್ವೆ, ಪ.ಪೂ. ಆಬಾ ಉಪಾಧ್ಯೆ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಪ.ಪೂ. ಡಾ. ಜಯಂತ ಆಠವಲೆ ಇವರು ಆಶೀರ್ವಚನದ ಸಂದೇಶ ಕಳಿಸಿದ್ದು ಈ ಸಂದರ್ಭದಲ್ಲಿ ಅವುಗಳನ್ನು ಓದಿ ಹೇಳಲಾಯಿತು.

By Suddi9

Leave a Reply

Your email address will not be published. Required fields are marked *