ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಯಕ್ಷಕಲಾ ಪೊಳಲಿ ಇದರ 21ನೇ ವಾರ್ಷಿಕೋತ್ಸವ ಅಂಗವಾಗಿ ಅ.1 ಶನಿವಾರದಂದು ಯಕ್ಷ-ಗಾನ-ಪಂಚಾಮೃತ ಕಾರ್ಯಕ್ರಮ ನಡೆಯಿತು.


ಭಾಗತವರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಬಲಿಪ ಶಿವಶಂಕರ ಭಟ್, ಸತೀಶ್ ಶೆಟ್ಟಿ ಬೋಂದೆಲ್, ಪುರುಷೋತ್ತಮ ಭಟ್ ನಿಡುವಜೆ, ಗಿರೀಶ್ ರೈ ಕಕ್ಯಪದವು, ಮದ್ದಳೆಗಾರರಾಗಿ ಕೃಷ್ಣ ಪ್ರಕಾಶ್ ಉಳಿತ್ತಾಯ, ವಿನಯ ಆಚಾರ್ಯ ಕಡಬ, ಚೆಂಡೆಯಲ್ಲಿ ಚಂದ್ರಶೇಖರ್ ಭಟ್ ಕೊಂಕಣಾಜೆ, ಚಕ್ರತಾಳ ಯುವರಾಜ ಆಚಾರ್ಯ ಕಾವಳಕಟ್ಟೆ ಇವರುಗಳ ಸಂಯೋಗದಲ್ಲಿ ನಡೆಯಿತು. ಕಿನ್ನಿಕಂಬಳ ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

