ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಜಗನ್ಮಾತೆಯ ವಿಶೇಷ ಆರಾಧನೆಯನ್ನು ಅ.11 ವಿಜಯದಶಮಿಯಂದು ಹಲವಾರು ಕಾರ್ಯಕ್ರಮದೊಂದಿಗೆ ಆಚರಿಸಲಾಗುವುದು.
ಕಾರ್ಯಕ್ರಮಗಳು: ಬೆಳಿಗ್ಗೆ ಗಂಟೆ 7.30 ರಿಂದ 9.30 ರವರೆಗೆ ‘ದುರ್ಗಾ ಹೋಮ’, 9.30 ರಿಂದ 11ರವರೆಗೆ ಮಧುಸೂದನ ಭಟ್ ಇವರಿಂದ ‘ವಿಶೇಷ ಭಜನೆ’, 11 ರಿಂದ 12 ರವರೆಗೆ ನವದಯರ್ಗೆಯರಿಗೆ ‘ಕುಮಾರಿ ಪೂಜೆ’, ಮಧ್ಯಾಹ್ನ 12ರಿಂದ ‘ಆರತಿ’ , 1 ರಿಂದ ಅನ್ನಪ್ರಸಾದ ಜರಗಲಿದೆ.ಎಂದು ರಾಮಕೃಷ್ಣತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
