ಬಂಟ್ವಾಳ: ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನವರಾತ್ರಿ ಉತ್ಸವವು ಅ.1 ಶನಿವಾರದಿಂದ ಅ.9ರ ಆದಿತ್ಯವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

untitled-a1

ಕಾರ್ಯಕ್ರಮಗಳು: ಅ.1 ಶನಿವಾರದಂದು  ರಾತ್ರಿ ಗಂಟೆ 8-00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕರೆಂಕಿಯ ಅಧ್ಯಕ್ಷರಾದ ಪ್ರಕಾಶ್ ಅಂಚನ್, ಜಿಲ್ಲಾ ಮಹಿಳಾ ವೇದಿಕೆಯ ಉಪಾಧ್ಯಕ್ಷರಾದ ಶ್ರೀಮತಿ ವಿಜಯ ನಾಯರ್,ಅಮೀನ್ ಎಂಟರ್‍ಪ್ರೈಸಸ್ ಮಾಲಕರಾದ ಧನಂಜಯ ರಾಮಲ್‍ಕಟ್ಟೆ, ಬೋಳಿಯಾರ್ ಕೆನರಾ ಬ್ಯಾಂಕ್ ಮ್ಯಾನೇಜರ್ ವಿ. ಬಾಲಕೃಷ್ಣ, ಕಳ್ಳಿಗೆ ತಾಲೂಕು ಪಂಚಾಯತ್ ಸದಸ್ಯರಾದ ಶಿವಪ್ರಸಾದ್ ಕನಪಾಡಿ, ಗ್ರಾಮ ಪಂಚಾಯತ್ ತುಂಬೆ ಸದಸ್ಯರಾದ ಮಹಮ್ಮದ್ ವಳವೂರು, ಕರೆಂಕಿಶ್ರೀ ಪುರಸ್ಕೃತ ಬಂಟ್ವಾಳ ಪತ್ರಕರ್ತರಾದ ಸಂದೀಪ್ ಸಾಲ್ಯಾನ್ ಆಗಮಿಸಲಿದ್ದು, ಇದೇ ವೇದಿಕೆಯಲ್ಲಿ ಸ್ಥಳೀಯ ಸರಕಾರಿ ಶಾಲೆಗಳಲ್ಲಿ 2015-16ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳ ಪುರಸ್ಕಾರ ನಡೆಯಲಿದೆ. ಆಯಿಷಾ ರಿಝಾ(ಪ್ರಾಥಮಿಕ ಬ್ರಹ್ಮರಕೂಟ್ಲು), ಮೋಕ್ಷಿತಾ(ಪ್ರಾಥಮಿಕ ನೆತ್ರಕೆರೆ), ಮಧುಶ್ರೀ(ಪ್ರಾಥಮಿಕ ಕೊಡ್ಮಾಣ್), ಧನ್ಯಶ್ರೀ (ಪ್ರಾಥಮಿಕ ತುಂಬೆ), ಮನೀಷಾ (ಪ್ರೌಢ ಕೊಡ್ಮಾಣ್), ಪ್ರತ್ಯೇಕ್(ಪ್ರೌಢ ಬಿ. ಮೂಡ), ಶ್ರೀಜಿತ್(ಪ್ರೌಢ ಬೆಂಜನಪದವು) ಸನ್ಮಾನಗೊಳ್ಳಲಿದ್ದಾರೆ.

jyothigudde-temple

ಸಭಾ ಕಾರ್ಯಕ್ರಮದ ಬಳಿಕ ಯಕ್ಷಜ್ಯೋತಿ ಪ್ರಾಯೋಜಕತ್ವದಲ್ಲಿ ತರಿಕಿಟ ಕಲಾ ಕಮ್ಮಟ (ರಿ.) ಜ್ಯೋತಿಗುಡ್ಡೆ ಮತ್ತು ಸ್ಥಳೀಯ ಹಾಗೂ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಕಲಾಕಾಣಿಕೆ ‘ಲೋಕಾಭಿರಾಮ’ ಎನ್ನುವ ಯಕ್ಷಗಾನವು ನಡೆಯಲಿದೆ. ಪ್ರಸಿದ್ಧ ಕಲಾವಿದರಾದ ಪ್ರೇಮರಾಜ್ ಕೊಯ್ಲ, ಪದ್ಮನಾಭ ಉದ್ಯಾವರ, ದಯಾನಂದ ಪಿಲಿಕೂರು, ಸದಾಶಿವ ಡಿ ತುಂಬೆ ಹಾಗೂ ಇನ್ನಿತರರು ಹಿಮ್ಮೇಳದಲ್ಲಿ ಖ್ಯಾತ ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆ, ಹಿಮ್ಮೇಳದಲ್ಲಿ ವಿನಯ ಕಡಬ, ಶ್ರೀಧರ ಪಡ್ರೆ, ಅಜಯ್ ಕುಮಾರ್ ಅಜಿಲ ಬೆಳ್ಳೂರು ಇವರು ಭಾಗವಹಿಸಲಿದ್ದಾರೆ.

ಅ.2  ಆದಿತ್ಯವಾರದಂದು  ಸಂಜೆ ಗಂಟೆ 5-30ರಿಂದ ಅಂಬಿಕಾ ಯಕ್ಷಗಾನ ಕಲಾ ಮಂಡಳಿ, ಮಲ್ಲೂರು ಕಲಾಯಿ ಇವರಿಂದ ‘ಶ್ರೀ ರಾಮದರ್ಶನಂ’ ಎಂಬ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

ವಿವಿಧ ಭಜನಾ ಮಂಡಳಿಗಳ ಸಂಕೀರ್ತನಾ ಸಹಕಾರದೊಂದಿಗೆ ಅ.3 ಸೋಮವಾರದಿಂದ ಅ.6 ಗುರುವಾರದವರೆಗೆ ಪ್ರತೀ ದಿನ ಸಂಜೆ ಗಂಟೆ 6-00ರಿಂದ ರಾತ್ರಿ ಗಂಟೆ 12-00ರವರೆಗೆ ‘ಭಜನಾ ಸಂಧ್ಯಾ ಜಾಗರಣಾ’ ಹಾಗೂ ಅ.7  ಶುಕ್ರವಾರ ಸೂರ್ಯೋದಯದಿಂದ ಅ.8 ಶನಿವಾರ ಸೂರ್ಯೋದಯದವರೆಗೆ ‘ ಏಕಾಹ ಭಜನೆ ‘ ನಡೆಯಲಿದೆ. ಅ.9 ನೇ ಆದಿತ್ಯವಾರರಾತ್ರಿ ಗಂಟೆ 9-00ಕ್ಕೆ ಆಯುಧ ಪೂಜೆನಡೆಯಲಿದೆ.

ನವರಾತ್ರಿಯ ಸಂದರ್ಭದಲ್ಲಿ ನಿತ್ಯ ಅನ್ನದಾನದ ಮೂಲಕ ಹತ್ತು ಹಲವು ವಿಶೇಷ ಸೇವೆಗಳು ಕ್ಷೇತ್ರದಲ್ಲಿ ನಡೆಯಲಿದ್ದು ಭಗವದ್ಭಕ್ತರು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಜ್ಯೋತಿಗುಡ್ಡೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್ (ರಿ.) ಜ್ಯೋತಿಗುಡ್ಡೆ ವತಿಯಿಂದ ವಿನಂತಿಸುತ್ತಿದ್ದೇವೆ ಎಂದು ಉದಯ್ ಕುಮಾರ್ ಜ್ಯೋತಿಗುಡ್ಡೆ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *