ಬಂಟ್ವಾಳ: ಮಹಿಳಾ ಮತ್ತು ಅಭಿವೃದ್ದಿ ಇಲಾಖೆ , ನರಿಕೊಂಬು ಗ್ರಾ.ಪಂ. ಅನ್ನಪೂರ್ಣ ಸ್ತ್ರೀಶಕ್ತಿ ಗುಂಪು, ಮೂಕಾಂಬಿಕಾ ಸ್ತ್ರೀ ಶಕ್ತಿ ಗೊಂಚಲು ಇದರ ಸಂಯುಕ್ತ ಆಶ್ರಯದಲ್ಲಿ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಮಹಿಳಾ ವಿಶೇಷ ಗ್ರಾಮ ಸಭೆ ಹಾಗೂ ಸ್ತ್ರೀ ಶಕ್ತಿ ಗೊಂಚಲುಗಳ ಸರ್ವಸದಸ್ಯರ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾ.ಪಂ. ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ಉದ್ಘಾಟಿಸಿದರು.

ವೇದಿಕೆಯಲ್ಲಿ ಕೆಡಿಪಿ ಸದಸ್ಯರಾದ ಉಮೇರ್ಶ, ರಘು ಸಪಲ್ಯ, ಕೃಷ್ಣ ಗಾಣಿಗ, ನರಿಕೊಂಬು ಗ್ರಾ.ಪಂ. ಉಪಾಧ್ಯಕ್ಷೆ ರಾಜೀವಿ, ಗ್ರಾ.ಪಂ. ಸದಸ್ಯರಾದ ಕಿಶೋರ್ ಶೆಟ್ಟಿ, ದಿವಾಕರ, ವಿಶ್ವನಾಥ ಪೂಜಾರಿ, ಚಂದ್ರಾವತಿ, ರಂಜಿತ್, ಬೇಬಿ, ಜುಬೈದ, ಉದಯ, ವಿಶಾಲಾಕ್ಷಿ, ಮೋಹಿನಿ, ರವೀಂದ್ರ ಸಪಲ್ಯ, ಸಂಪನ್ಮೂಲ ವ್ಯಕ್ತಿಗಳಾಗಿ ಆರತಿ, ಕೃಷಿಕ ಕೃಷ್ಣಪ್ಪ ಗೌಡ, ಸ್ತ್ರೀ ಶಕ್ತಿ ಗೊಂಚಲು ಅಧ್ಯಕ್ಷರಾದ ಗೀತಾ ಶೇಡಿಗುರಿ, ಗೀತಾ ನಾಟಿ, ಫಲ್ಗುಣಿ ವಿ. ಸಹಕಾರಿ ಸಂಘದ ಅಧ್ಯಕ್ಷೆ ಗೀತಾಜಯ ತೀರ್ಥ, ಸುನೀತಾ ಪದ್ಮನಾಭ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಬಿ. ಕಸ್ಬಾ ವಲಯದ ಹಾಗೂ ಬಾಳ್ತಿಲ ವಲಯದ ಅಂ. ಕಾರ್ಯಕರ್ತೆಯರು, ಗ್ರಾ.ಪಂ. ವ್ಯಾಪ್ತಿಯ ಸ್ತ್ರೀ ಶಕ್ತಿ ಸದಸ್ಯೆಯರು ಭಾಗವಹಿಸಿದರು. ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಗಿರಿಜಾ ಸ್ವಾಗತಿಸಿ, ಅಂ.ಕಾರ್ಯಕರ್ತೆ ಜಿನ್ನಮ್ಮ ವಂದಿಸಿದರು. ಹಿರಿಯ ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.
