ಉಡುಪಿ: ಉಡುಪಿಯ ಕಡಿಯಾಳಿ ಜಂಕ್ಷನ್ ಬಳಿ ಕಳೆದ 31 ವರ್ಷಗಳಿಂದ ನಿಸ್ವಾರ್ಥವಾಗಿ ಟ್ರಾಫಿಕ್ ವಾರ್ಡನ್ ಆಗಿ ಸಮಾಜ ಸೇವೆ ಮಾಡುತ್ತಿರುವ ಎ. ಅಬುಬಕ್ಕರ್ ಸಾಹೇಬ್ ರವರನ್ನು ಪರ್ಕಳ ಜೇಸಿಐ ವತಿಯಿಂದ ಸೆ.15 ರಂದು ಜೇಸಿ ಸಪ್ತಾಹದ ಅಂಗವಾಗಿ ಜೀವ ರಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಇಂದಿರಾನಗರದ ಬಳಿಯಿರುವ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೇಸಿ ವಲಯ ಉಪಾಧ್ಯಕ್ಷ ಮಂದಾರ ಕಾಳೆ ಮತ್ತು ವಲಯಾಧಿಕಾರಿ ಮನೋಜ್ ಕಡಬ ಶೆರ್ಲಿ ಮನೋಜ್ ರವರು ಅವರನ್ನು ಗೌರವಿಸಿದರು. ಮನೋಜ್ ಕಡಬ ರವರು ಸನ್ಮಾನಿತರ ಪರವಾಗಿ ಮಾತನಾಡಿದರು .
ಈ ಸಂದರ್ಭದಲ್ಲಿ ಪರ್ಕಳ ಜೇಸಿ ಅಧ್ಯಕ್ಷ ಎಂ ಮರಿಯಪ್ಪ, ಪೂರ್ವಾದ್ಯಕ್ಷರಾದ ಸುಧೀರ್ ಶೆಟ್ಟಿಗಾರ್, ಸಿಂಡಿಕೇಟ್ ಬ್ಯಾಂಕ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಂತೋಷ್ ಫಾರ್ಮಾ, ಪ್ರಮೋದ್ ಕುಮಾರ್, ಜೇಸಿ ಉಡುಪಿ ಸಿಟಿ ಅಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.

