ಉಡುಪಿ: ಬಿಜಾಪುರ ಬಸವ ಸಾಹಿತ್ಯ ವೇದಿಕೆ ಇದರ ವತಿಯಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವ ಸಾಧಕರಿಗೆ ಕೊಡಮಾಡುವ ಬಸವಶ್ರೀ ರಾಜ್ಯ ಪುರಸ್ಕಾರ ವನ್ನು ಜೇಸಿಐ ಉಡುಪಿ ಸಿಟಿ ಇದರ ಅದ್ಯಕ್ಷ ಯುವ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪ್ರಭು ಕರ್ವಾಲು ಪಡೆದುಕೊಂಡಿದ್ದಾರೆ.
ಬಿಜಾಪುರದ ಪುರಭವನದಲ್ಲಿ ಸೆ.18 ರಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ರಾಜಶೇಖರನ್ ರವರು ಪ್ರಧಾನ ಮಾಡಿದರು.ಈ ಸಂದರ್ಭದಲ್ಲಿ ವೇದಿಕೆಯ ಬಂಡೆಪ್ಪ ಕೆ,ಬಸವಾನಂದ ಸ್ವಾಮೀಜಿ,ಹಿರಿಯ ಸಹಕಾರಿ ವಿರೂಪಾಕ್ಷಪ್ಪ ಮುಂತಾದವರು ಉಪಸ್ಥಿತರಿದ್ದರು.

