16KinniKollur

ಪ್ರೀತಿ ವಿಶ್ವಾಸದ ಜೊತೆಗೆ ಸಮಾಜದ ಏಳಿಗೆಗಾಗಿ ಸೇವೆ ನಡೆಸುವ ಮೂಲಕ ಎಲ್ಲಾ ಜನರು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದಾಗ ದೇಶದ ಉನ್ನತಿ ಸಾಧ್ಯ ಎಂದು ಪಡುಬಿದ್ರಿಯ ಎಂ.ಡಿ. ಅಂಚನ್ ಆಯುವರ್ೇದ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಡಾ| ಎನ್. ಟಿ. ಅಂಚನ್ ಹೇಳಿದರು.
ಕೊಲ್ಲೂರು ಸರಕಾರಿ ಆಯುವರ್ೇದ ಆಸ್ಪತ್ರೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ| ಮುರಳೀಧರ ಹಾಗೂ ಧರ್ಮಪತ್ನಿ ಡಾ| ವಿದ್ಯಾರಾಣಿ ಅವರಿಗೆ ಭಾನುವಾರ ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಪ ಆಡಳಿತಾಧಿಕಾರಿ ಎನ್. ಆರ್. ಬಲ್ಲಾಳ್, ಕೊಲ್ಲೂರು ಸರಕಾರಿ ಆಯುವರ್ೇದ ಆಸ್ಪತ್ರೆಯ ವೈದ್ಯಾಧಿಕಾರಿ
ಡಾ| ಶೋಭಾರಾಣಿ, ಊರಿನ ಹಿರಿಯರಾದ ಎಂ. ಚಂದ್ರಶೇಖರ ಭಟ್, ಕೊಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಧಾಸಿನಿ ಮತ್ತಿತರರು ಉಪಸ್ಥಿತರಿದ್ದರು.
ವಿಲ್ಸನ್ ರೋಡ್ರಿಗಸ್ ಸ್ವಾಗತಿಸಿ, ಐತಪ್ಪ ಸಾಲ್ಯಾನ್ ಪ್ರಸ್ತಾವಿಸಿದರು. ಪೊಂಪೈ ಜೂನಿಯರ್ ಕಾಲೇಜು ಭಾಷ ಸಹ ಶಿಕ್ಷಕ ಲಕ್ಷ್ಮೀಶ ಎನ್. ಶಾಸ್ತ್ರಿ ಅಭಿನಂಧನಾ ಭಾಷಣಗೈದರು. ಎಲ್ಲಪ್ಪ ಸಾಲ್ಯಾನ್ ವಂದಿಸಿ ನ್ಯಾಯವಾದಿ ಶಶಿಧರ ಅಡ್ಕತ್ತಾಯ ಕಾರ್ಯಕ್ರಮ ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *