ಮುಂಬಯಿ: ಇತ್ತೀಚೆಗೆ ಮಹಾನಗರನಲ್ಲಿ ನಡೆಸಲ್ಪಟ್ಟ ಲಕ್ಮೇ ಫ್ಯಾಶನ್ ವೀಕ್ ಪ್ರದರ್ಶನದಲ್ಲಿ ಪ್ರಖ್ಯಾತ ಶೈಲಿಗಾರ್ತಿ ರೂಪಿತ ಬಾಲಿವುಡ್‍ನ ವಸ್ತ್ರ ನಕ್ಷೆಗಾರ್ತಿ (ಸೆಲೆಬ್ರೆಟಿ ಸ್ಟೈಲಿಸ್ಟ್ ಟರ್ನ್‍ಡ್ ಡಿಝೈನರ್) ಈಶಾ ಎಲ್.ಅವಿೂನ್ ತನ್ನ ಫಾರೆಸ್ಟ್ ನಾೈರ್ ಕಲೆಕ್ಷನ್‍ನ್ನು ಪ್ರಸ್ತುತ ಪಡಿಸಿದರು. ಮಾಜಿ ಮಿಸ್ ವರ್ಲ್ಡ್ ಮತ್ತು ಬಾಲಿವುಡ್ ನಟಿ ಲಾರಾ ದತ್ತ ಅವರು ಈಶಾ ರೂಪಿಸಿದ ಫಾರೆಸ್ಟ್ ನಾೈರ್ ಕಲೆಕ್ಷನ್ ಧರಿಸಿ ರ್ಯಾಂಪ್‍ವಾಕ್‍ನಲ್ಲಿ ಬೆಳದಿಂಗಳ ಸೌದರ್ಯದ ವಾತಾವರಣ ಸೃಷ್ಟಿಕೃತಿಯಲ್ಲಿ ಸಾವಕಾಶವಾಗಿ ಹೆಜ್ಜೆಗಳನ್ನಿತ್ತರು.

Eshaa Amiin -  Lara Dutta

Eshaa L. V Amin-2

Lakhme Fashion-3

Eshaa L.V Amin-1

Lakhme Fashion-1

Lakhme Fashion-2

ಬಾಲಿವುಡ್‍ನ ಡೈಸೀ ಶ್ಹಾ, ಮನಸ್ವೀ ಮಗ್‍ಮೈ, ಮಧುರಿಮಾ ತುಳಿ, ವಂದನಾ ಸಜ್ನಾನಿ, ರಾಜೇಶ್ ಖತ್ತರ್, ಗೌರವ್ ಚೋಫ್ರಾ ಮತ್ತಿತ್ತನೇಕರು ಈಶಾ ಅವಿೂನ್ ಪ್ರಸ್ತುತಿಯನ್ನು ಮೆಚ್ಚಿ ಅಭಿನಂದಿಸಿದರು. ಬಾಲಿವುಡ್ ಸೆಲೆಬ್ರೆಟಿಗಳ ಸ್ಟೈಲಿಸ್ಟ್ ಪ್ರಸಿದ್ಧಿಯ ಫ್ಯಾಶನ್ ರಂಗದ ಹೆಸರಾಂತ ಸ್ಟೈಲಿಸ್ಟ್ ಈಶಾ ಅವಿೂನ್ ಮಂಗಳೂರು ಬಜಪೆ ನಿವಾಸಿ, ಮುಂಬಯಿಯಲ್ಲಿನ ಉದ್ಯಮಿ ಎಲ್.ವಿ ಅವಿೂನ್ ಮತ್ತು ಸುಧಾ ಎಲ್.ಅವಿೂನ್ ದಂಪತಿ ಸುಪುತ್ರಿ ಆಗಿದ್ದಾರೆ.

ಚಿತ್ರ ವರದಿ : ರೊನಿಡಾ ಮುಂಬಯಿ

By suddi9

Leave a Reply

Your email address will not be published. Required fields are marked *