ಮುಂಬಯಿ, : ಅಂತರರಾಷ್ಟ್ರೀಯ ಪ್ರಸಿದ್ಧ ಕೇಶ ವಿನ್ಯಾಸಗಾರ, `ಭಂಡಾರಿ ವಿಭೂಷಣ’ ಡಾ| ಶಿವರಾಮ ಕೆ.ಭಂಡಾರಿಗೆ ಅವರು ಬರುವ ಸೆ.2-4ರಂದು ಅಮೆರಿಕದ ನ್ಯೂಜೆರ್ಸಿ ನಗರದ ಅಲ್ಲಿನ ಅಟ್ಲಾಂಟಿಕ್ ಸಿಟಿ ಕನ್ವೆನ್ಶನ್ ಹಾಲ್‍ನಲ್ಲಿ ನೆಡೆಯಲಿರುವ ಅಸೋಸಿಯೇಶನ್ ಆಫ್ ಕನ್ನಡ ಕೂಟ’ಸ್ ಆಫ್ ಅಮೇರಿಕಾ ಸಂಯೋಜಿತ 9ನೇ ವಿಶ್ವ ಅಕ್ಕ ಕನ್ನಡ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರ

Dr. Shivaram Bhandary (C)

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಸಿದ್ದರಾಮಯ್ಯ ಹಾಗೂ ಅನೇಕ ಮಂತ್ರಿಗಳೂ ಸಮಾರಂಭದಲ್ಲಿ ಭಾಗವಹಿಸಲಿದ್ದು, ಅಕ್ಕ ಬೋರ್ಡ್ ಆಫ್ ಟ್ರಸ್ಟ್ ಅಧ್ಯಕ್ಷ ಅಮರ್‍ನಾಥ್ ಗೌಡ ಮತ್ತು ಅಕ್ಕ ವಿಶ್ವ ಕನ್ನಡ 2016ರ ಸಮ್ಮೇಳನಾಧ್ಯಕ್ಷ ರಾಜ್ ಪಾಟೀಲ್ ಸಾರಥ್ಯದಲ್ಲಿ ಅಕ್ಕ ಸಮ್ಮೇಳನದ ಹತ್ತು ಹಲವು ವಿಶೇಷತೆಗಳನ್ನು ಹೊಂದಿದ್ದು, ಮಾಜಿ ಸಚಿವ, ಚಿತ್ರನಟ ಅಂಬರೀಶ್ ಬಳಗದ `ಅಂಬಿ ನೈಟ್’ ಪ್ರಮುಖ ಆರ್ಕಷಣೆಯಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.ರಾಷ್ಟ್ರದ ಆಥಿರ್ಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಸಮುದಾಯದ ಮೂಲ ಕುಲಕಸಬು ಕ್ಷೌರಿಕತೆಯನ್ನು ವೃತ್ತಿಯಾಗಿಸಿ ಜಾಗತಿಕ ಮನ್ನಣೆಗೆ ಪ್ರೇರಕರಾದ ತುಳು-ಕನ್ನಡಿಗ, ಶಿವಾ’ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ ಅತ್ತೂರು (ಕಾರ್ಕಳ) ಅವರು ಬಾಲಿವುಡ್‍ನ ಹೆಸರಾಂತ ಕೇಶರೂಪಕ ಎಂದೇ ಪ್ರಸಿದ್ಧರು. ಕಾರ್ಕಳ ತಾಲೂಕಿನ ಅತ್ತೂರು ಧರೆಗುಡ್ಡೆ ನಿವಾಸಿ (ದಿ) ಕೃಷ್ಣ ಭಂಡಾರಿ ಮತ್ತು ಗುಲಾಬಿ ಕೆ.ಭಂಡಾರಿ ಸುಪುತ್ರನಾಗಿದ್ದು ಹೇರ್ ಕಟ್ಟಿಂಗ್ ಸಲೂನ್‍ಗೆ ಹೊಸ ರೂಪ ನೀಡಿ ತನ್ನ ಉದ್ಯಮದ ಮೂಲಕ ಗೌರವ ಡಾಕ್ಟರೇಟ್‍ಗೆ ಪಾತ್ರಾರಾಗಿರುವರು.

By suddi9

Leave a Reply

Your email address will not be published. Required fields are marked *