ಉಳ್ಳಾಲ: ಎಲ್ಲಾ ರೀತಿಯ ರಿಲೀಫ್ ಕಾರ್ಯದಲ್ಲಿ ತೊಡಗಿದ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ದ.ಕ ಜಿಲ್ಲೆಯಲ್ಲಿ ಹೆಸರು ಪಡೆದ ಸಂಘಟನೆಯಾಗಿ ಎಂದು ವಕ್ಫ್ ಸಲಹ ಸಮಿತಿ ಅಧ್ಯಕ್ಷ ಎ.ಎಂ ರಶೀದ್ ಹಾಜಿ ಅಭಿಪ್ರಾಯಪಟ್ಟರು.ಅವರು ಶುಕ್ರವಾರ ಪಂಪ್ವೆಲ್ನ ತಕ್ವ ಮಸೀದಿ ವಠಾರದಲ್ಲಿ ನಡೆದ ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ವತಿಯಿಂದ ಮಳ್ಹರ್ ವಿದ್ಯಾ ಸಂಸ್ಥೆಯ ಶಿಲ್ಪಿ ಮರ್ಹೂಂ ಅಸ್ಸಯ್ಯದ್ ಪೋಸೋಟ್ ತಂಙಳ್ರವರ ಸ್ಮರಣಾರ್ಥ ಅರ್ಹರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಫ್ ತೊಕ್ಕೋಟ್ಟು ರಿಲೀಫ್ ಸವಿರ್ಸ್ ಗೌರವಾಧ್ಯಕ್ಷ ಇಕ್ಬಾಲ್ ಹಾಜಿ ಹೋಲಿಗೆ ಯಂತ್ರ ವಿತರಿಸದರು.ಉಳ್ಳಾಲ ಡಿವಿಸಂನ್ ಉಪಾಧ್ಯಕ್ಷ ಮನೀರ್ ಸಖಾಫಿ ಕಾ ಮಿಲ್ ಪ್ರಸ್ತಾವಿಕ ಮಾತುಗಳಾನ್ನಾಡಿದರು.
ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ, ಎಸ್ ಎಸ್ಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ಸಂಚಾಲಕ ಉಮರ್ ಕೈರಂಗಳ, ಸದಸ್ಯ ಬಾತಿಷ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.ಎಸ್ಸೆಸ್ಸೆಫ್ ದ.ಕ ಕೋಶಾಧಿಕಾರಿ ಅಲ್ತಾಫ್ ಕುಂಪಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

