.ಸಮಾಜ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಬಂಟ್ವಾಳ, ಇದರ ಸಿಬ್ಬಂದಿಗಳಿಗೆ ಕೌಶಬ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಬ್ಯಾಂಕಿನ ಸಭಾ ಭವನದಲ್ಲಿ ಆಯೋಜಿಸಲಾಯಿತು. ಉಜಿರೆ ಎಸ್ ಡಿಒ ಎಂ ಸಿ ರೆಸಿಡೆನ್ಸಿಯಲ್ ಕಾಲೇಜಿನ ಪ್ರಾಂಶುಪಾಲ ಪ್ರೊ ಟಿ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ , ಸಿಬ್ಬಂದಿಗಳು ತಮ್ಮ ವೃತ್ತಿ ಮತ್ತು ಜೀವನದಲ್ಲಿ ಯಾವ ರೀತಿ ಕೌಶಲ್ಯವನ್ನು ಹೊಂದಿ ಅಭಿವೃದ್ಧಿ ಕಾಣಬಹುದು ಎಂಬುದನ್ನು ಪ್ರತ್ಯಕ್ಷಿಕೆಯ ಮೂಲಕ ಮನದಟ್ಟು ಮಾಡಿದರು. ಈ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್, ಉಪಾಧ್ಯಕ್ಷ ವಿಶ್ವನಾಥ್ ಕೆ ಬಿ, ನಿರ್ದೇಶಕರುಗಳಾದ ವಿಶ್ವನಾಥ ಮಜಿ, ವಿ ಪದ್ಮನಾಭ ಕಟ್ಟೆ, ಅರುಣ್ ಕುಮಾರ್, ಜನಾರ್ಧನ ಬೊಂಡಾಲ, ಎಂ ವಾಮನ ಟೈಲರ್, ವಿ ವಿಜಯ ಕುಮಾರ್ ಮತ್ತು ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬ್ಯಾಂಕಿನ ವ್ಯವಸ್ತಾಪಕ ಉಮೇಶ್ ಪಿ ಕೆ ಕಾರ್ಯಕ್ರಮ ಸಂಯೋಜಿಸಿದರು.

1 (1)

By Suddi9

Leave a Reply

Your email address will not be published. Required fields are marked *