ಶ್ರೀರಾಮ್ ಫ್ರೆಂಡ್ಸ್ ವಿಟ್ಲ ಇದರ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಯೋಧರ ಹಾಗೂ ದಕ್ಷ ಅಧಿಕಾರಿಗಳ ಸ್ಮರಣಾರ್ಥ 2 ನೇ ವರ್ಷದ ಕಬಡ್ಡಿ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ ನಡೆಯಿತು. ಇದರ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ದಯಾನಂದ ಉಜಿರೆಮಾರ್, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ದೇವಿಪ್ರಸಾದ್ ಶೆಟ್ಟಿ ಬೆಂಞತಿಮಾರ್, ರಾಮ್‍ದಾಸ್ ಶೆಟ್ಟಿ ಮಂಗಿಲಪದವು, ಸುಮಿತ್ ಕಾರ್ಯಾಡಿ, ಗೋಪಾಲಕೃಷ್ಣ ಪಾಟಾಳಿ ಕುದ್ದುಪದವು, ಶ್ರೀರಾಮ್ ಫ್ರೆಂಡ್ಸ್ ನ ಅಧ್ಯಕ್ಷ ರವಿಕುಮಾರ್ ಕಟ್ಟೆ, ಪ್ರಶಾಂತ್ ಶೆಟಿ ಕಂಬಳಬೆಟ್ಟು ಉಪಸ್ಥತರಿದ್ದರು. ಕಬಡ್ಡಿ ಯಲ್ಲಿ ಪ್ರಥಮ ಶ್ರೀರಾಮ ಫ್ರೆಂಡ್ಸ್, ದ್ವಿತೀಯ ಗೋಪಾಕೃಷ್ಣ ಫ್ರೆಂಡ್ಸ್ ತೆಕ್ಕರೆ, ತೃತೀಯ ವಿಷ್ಣುಮೂರ್ತಿ ಕುಂಡಡ್ಕ ಹಾಗೂ ಚತುರ್ಥ ಕೋಲ್ಪೆ ತಂಡ ಪಡೆಯಿತು. ಹಗ್ಗಜಗ್ಗಾಟದಲ್ಲಿ ಪ್ರಥಮ ಸಾಯಿ ಎಂಟರ್ ಪ್ರೈಸಸ್ ಎ ಹಾಗೂ ದ್ವಿತೀಯ ಸಾಯಿ ಎಂಟರ್ ಪ್ರೈಸಸ್ ಬಿ ತಂಡಗಳು ಪಡೆದವು. ಪಂದ್ಯಾಟಗಳ ನಿರೂಪಣೆ ಲಕ್ಷ್ಮಿಕಾಂತ್ ಕಟ್ಟೆ ಮಾಡಿದರು. ದನುಷ್ ಭಂಡಾರಿ ಸ್ವಾಗತಿಸಿದರು. ವಿಘ್ನೇಶ್ ವಂದಿಸಿದರು.

