ವಿಟ್ಲ: ಶೋಕಮಾತೆಯ ಇಗರ್ಜಿಯ ಸಭಾ ಭವನದಲ್ಲಿ ಕೆಥೋಲಿಕ್ ಸಭಾ ವಿಟ್ಲ ಹಾಗೂ ಚರ್ಚ್ ಪಾಲನಾ ಸಮಿತಿ ವತಿಯಿಂದ ಕ್ರೈಸ್ತ ಎಸ್ ಎಸ್ ಎಲ್ ಸಿ, ಪಿ ಯು ಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ನಡೆಯಿತು.
ವಿಟ್ಲ ಚರ್ಚ್ನ ಧರ್ಮಗುರು ಎರಿಕ್ ಕ್ರಾಸ್ತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರಿನ ಡಾ| ಹೆಚ್ ಆರ್ ಲಸ್ರಾದೊ ಮತ್ತು ಪಾಲನಾ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನಸ್ ಭಾಗವಹಿಸಿದ್ದರು. ಕೆಥೋಲಿಕ್ ಸಭಾದ ಅಧ್ಯಕ್ಷ ಮನೋಹರ್ ಲ್ಯಾನ್ಸಿ ಡಿ ಸೋಜಾ ಸ್ವಾಗತಿಸಿದರು. ಕಾರ್ಯದರ್ಶಿ ಲಿಡಿಯಾ ಸಿಕ್ವೇರಾ ವಂದಿಸಿದರು. ಲೋಯ್ಡ್ ಡಯಾಸ್ ಕಾರ್ಯಕ್ರಮ ನಿರ್ವಹಿಸಿದರು.
