ವಿಟ್ಲ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಸಿಂಧೂರ ಪ್ರತಿಷ್ಠಾನ ವಿಟ್ಲ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಮುಖ್ಯೋಪಾಧ್ಯಯರಾಗಿ ಕಾರ್ಯನಿರ್ವಹಿಸಿದ ಪುಚ್ಚೆಕೆರೆ ಕೃಷ ಭಟ್ ರವರ ಸಂಸ್ಮರಣೆ ಕಾರ್ಯಕ್ರಮ ಹಾಗೂ ಮಹಿಳೆಯರಿಂದ ಮೋಕ್ಷ ಸಂಗ್ರಾಮ ಎಂಬ ಯಕ್ಷಗಾನ ತಾಳ ಮದ್ದಳೆಯು ನಡೆಯಿತು.
ಸಂಸ್ಮರಣಾ ಭಾಷಣ ಮುಖ್ಯ ಶಿಕ್ಷಕ , ಯಕ್ಷಗಾನ ಕಲಾವಿದ ಶಿರಂಕಲ್ಲು ಪಶುಪತಿ ಶಾಸ್ತ್ರಿ ಮಾಡಿದರು. ವಿಟ್ಲ ಅರಮನೆಯ ಜಯರಾಮ ವರ್ಮ ಹಾಗೂ ದಿನಕರ ಭಟ್ ಮಾವೆ ಕಾರ್ಯಕ್ರಮ ಉದ್ಘಾಟಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ದುರ್ಗಾಪರಮೇಶ್ವರಿ ಕುಕ್ಕಿಲ, ಚೆಂಡೆ ಮದ್ದಳೆ ಹಾಗೂ ಶೃತಿಯಲ್ಲಿ ಪ್ರಕಾಶ್ ವಿಟ್ಲ, ಅಭಿಷೇಕ್ ಬಿ ಚಣಿಲ, ಶರಣ್ಯ ಎನ್ ಹಾಗೂ ರತ್ನಾವತಿ ಎಸ್ ಭಟ್ ಸಹಕರಿಸಿದರು. ಅರ್ಥಧಾರಿಗಳಾಗಿ ಸಾವಿತ್ರಿ ಶಾಸ್ತ್ರಿ, ಶಾರದಾ ಕನ್ಯಾನ, ಮಧುರಾ ಕೆ, ಪ್ರಭಾ ಬಿ ಚಣಿಲ, ಹೇಮಾವತಿ ಟಿ ಭಟ್ ಮತ್ತು ಅನುಷಾ ಡಿ ಭಾಗವಹಿಸಿದ್ದರು. ಪ್ರತಿಷ್ಠಾನದ ಸಂಚಾಲಕ ಚಣಿಲ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ಸಂಯೋಜಿಸಿದರು
