ಬಂಟ್ವಾಳ:ಬಂಟ್ವಾಳ ಲಯನ್ಸ್ ಕ್ಲಬ್ಬಿನ ಸ್ಥಾಪಕಾಧ್ಯಕ್ಷ ಡಾ.ವಸಂತ ಬಾಳಿಗಾ ಅವರು ನೀಡಿದ ಸಲಹೆಯಂತೆ ಖಾಸಗಿ ಸಂಘ ಸಂಸ್ಥೆಗಳ ನೆರವು ಪಡೆದು ಇಲ್ಲಿನ ಪುರಸಭಾ ವ್ಯಾಪ್ತಿಯ ನಗರ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವುದು ಸೇರಿದಂತೆ ಕಳವು ಮತ್ತಿತರ ಕಿಡಿಗೇಡಿ ಕೃತ್ಯ ಪತ್ತೆಹಚ್ಚಲು ಸಿ.ಸಿ.ಕ್ಯಾಮೆರಾ ಅಳವಡಿಸುವ ಬಗ್ಗೆ ಪುರಸಭೆ ಚಿಂತನೆ ನಡೆಸಿದೆ ಎಂದು ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಹೇಳಿದ್ದಾರೆ.
12btl-Purasabhe
ಬಂಟ್ವಾಳ ಪುರಸಭೆಯಲ್ಲಿ ಸ್ವಚ್ಛ ಭಾರತ ಮತ್ತು ನಿರ್ಮಲ ಬಂಟ್ವಾಳ ಯೋಜನೆಯಡಿ ಶುಕ್ರವಾರ ಸಂಜೆ ನಡೆದ ನಗರ ಟಾಸ್ಕ್‍ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಸಾರ್ವಜನಿಕರ ಸಲಹೆ ಸೂಚನೆ ಸ್ವೀಕರಿಸಿದ ಬಳಿಕ ಮಾತನಾಡಿದರು.ಮಾತ್ರವಲ್ಲದೆ ಪುರಸಭೆ ವ್ಯಾಪ್ತಿಯ ಒಂದು ವಾರ್ಡಿನಲ್ಲಿ ಪ್ರಾಯೋಗಿಕವಾಗಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸಿ ಸಾವಯವ ಗೊಬ್ಬರ ತಯಾರಿಸುವ ಬಗ್ಗೆ ಜನತೆಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಈಗಾಗಲೇ ಧರ್ಮಸ್ಥಳ, ಉಜಿರೆ, ಕಡಬ ಮತ್ತಿತರ ಪ್ರದೇಶದಲ್ಲಿ ತ್ಯಾಜ್ಯದಿಂದ ಕೇವಲ 47 ದಿನಗಳಲ್ಲಿ ಪೌಷ್ಠಿಕ ಸಾವಯವ ಗೊಬ್ಬರ ತಯಾರಿಸುವಲ್ಲಿ ಯಶಸ್ವಿಯಾಗಿರುವ ಯುವ ಸಂಶೋಧಕ ರೋಹಿತ್ ಇವರಿಗೆ ಜವಾಬ್ದಾರಿ ವಹಿಸಿ ಕೊಡುವುದಾಗಿ ಅವರು ತಿಳಿಸಿದರು
ಇದೇ ವೇಳೆ ಬಳಕೆದಾರರ ವೇದಿಕೆ ಸಂಚಾಲಕ ಎಚ್.ಸುಂದರ ರಾವ್, ದಾಮೋದರ ಸಂಚಯಗಿರಿ, ಬಾಲಕೃಷ್ಣ ಶೆಟ್ಟಿ ರಂಗೋಲಿ ಮತ್ತಿತರರು ವಿವಿಧ ಸಲಹೆ ನೀಡಿದರು.ಪುರಸಭಾ ಸದಸ್ಯ ಜಗದೀಶ ಕುಂದರ್ ಮತ್ತು ಪ್ರವೀಣ ಜಕ್ರಿಬೆಟ್ಟು ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬರುವ ವಾಹನಗಳಲ್ಲಿ ತ್ಯಾಜ್ಯ ತಂದು ನಗರ ಪ್ರದೇಶದಲ್ಲಿ ಎಸೆಯುತ್ತಿದ್ದಾರೆ. ಇಂತಹವರಿಗೆ ಗರಿಷ್ಟ ಮೊತ್ತದ ದಂಡ ವಿಧಿಸಬೇಕು ಎಂದರು. ಈ ಸಭೆಯಲ್ಲಿ ಬಹುತೇಕ ಮಂದಿ ಪುರಸಭಾ ಸದಸ್ಯರು ಗೈರು ಹಾಜರಾಗಿರುವುದು ಕಂಡು ಬಂತು.ಪುರಸಭೆ ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ, ಸದಸ್ಯರಾದ ಗಂಗಾಧರ ಪೂಜಾರಿ, ಮಹಮ್ಮದ್ ಶರೀಫ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.ಪುರಸಭೆ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ, ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತಡಿ, ಮೇಲ್ವಿಚಾರಕಿ ಉಮಾವತಿ, ಅಬ್ದುಲ್ ರಝಾಕ್, ರತ್ನಪ್ರಸಾದ್ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *