ಶಿಕ್ಷಕರು ವ್ಯಕ್ತಿ ವಿಕಸನ ಶಿಲ್ಪಿಗಳು: ತುಂಗಪ್ಪ ಬಂಗೇರ
ಬಂಟ್ವಾಳ:ಸಮಾಜದಲ್ಲಿ ಭ್ರಷ್ಟಾಚಾರರಹಿತ ಮತ್ತು ಶಿಸ್ತುಬದ್ಧ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಭವಿಷ್ಯ ರೂಪಿಸುವ ವಿದ್ಯಾರ್ಥಿಗಳಲ್ಲಿ ವ್ಯಕ್ತಿ ವಿಕಸನಗೊಳಿಸುವ ಶಿಲ್ಪಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ.ತಾಲ್ಲೂಕಿನ ಕುಕ್ಕಿಪಾಡಿ ಸಂತ ಬಾರ್ತಲೋಮಿಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕೆರೆಬಳಿ ಮತ್ತು ಚೆನ್ನೈತ್ತೋಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳನ್ನು ಸರ್ಕಾರಿ ಮತ್ತು ಆಂಗ್ಲ ಮಾಧ್ಯಮ ಎಂಬ ತಾರತಮ್ಯ ಮತ್ತು ಕೀಳರಿಮೆ ಇಲ್ಲದೆ ಪ್ರತಿಭಾನ್ವಿತ ಪ್ರಜೆಯಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ತಿಳಿಸಿದರು.
ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಸುಂದರ ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಗಬೆಟ್ಟು ಮತ್ತು ಚೆನ್ನೈತ್ತೋಡಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪ್ರಭಾಕರ ಪ್ರಭು ಮತ್ತು ರತ್ನಾವತಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ಪರ್ಧೆಯಲ್ಲಿ ಮಕ್ಕಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

11btl-Kukkipady
ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಮತ್ತಿತರರು ಶುಭ ಹಾರೈಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಯೋಗೀಶ ಆಚಾರ್ಯ ಎಲ್ಪೇಲು, ಲಿಂಗಪ್ಪ ಪೂಜಾರಿ, ಸುಜಾತ ಪೂಜಾರಿ, ಸುಧಾಕರ ಶೆಟ್ಟಿ, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಜೈನ್, ಕರಿಮಲೆ ಬಾಲ ಏಸು ಚರ್ಚಿನ ಪಾಲನಾ ಮಂಡಳಿ ಸದಸ್ಯ ಆಲ್ಬರ್ಟ್ ಡಿಸೋಜ, ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು.
ಸ್ಪರ್ಧೆಯಲ್ಲಿ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 25 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮುಖ್ಯಶಿಕ್ಷಕ ಅಂಬ್ರೋಸ್ ವಾಲ್ಟರ್ ಸ್ವಾಗತಿಸಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಡಿ.ಕುಮಾರ್ ವಂದಿಸಿದರು. ಶಿಕ್ಷಕ ವೇದಾನಂದ ಕಾರಂತ ಕಾರ್ಯಕ್ರಮ ನಿರೂಪಿಸಿದರು.
—

By Suddi9

Leave a Reply

Your email address will not be published. Required fields are marked *