ಮಂಗಳೂರು:  ಮಳೆ ಸುರಿದರೆ ಸಾಕು, ಮೂಲ್ಕಿ ಬಳಿಯ ಹಳೆಯಂಗಡಿ ಜಂಕ್ಷನ್ನಲ್ಲಿ ಬಸ್ ಕಾಯುವ ಪ್ರಯಾಣಿಕರಿಗೆ, ರಸ್ತೆಯ ಬದಿ ನಡೆದಾಡುವ ಪಾದಚಾರಿಗಳು ಇನ್ನಿಲ್ಲದ ಪಾಡು ಪಡುತ್ತಾರೆ. ಇದಕ್ಕೆ ಕಾರಣ ರಾಷ್ಟ್ರೀಯ ಹೆದ್ದಾರಿ ಬದಿ ನಿರ್ಮಾಣವಾಗುವ ಹೊಂಡ ಗುಂಡಿಗಳಲ್ಲಿ ಶೇಖರಣೆ ಆಗುವ ನೀರು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕವಾದರೂ ಈ ಸಮಸ್ಯೆಗೆ ಮುಕ್ತಿ ಸಿಕ್ಕೀತು ಎಂದು ಭಾವಿಸಿದ್ದ ಜನರು ಇದೀಗ ಇಲಾಖೆಗೆ ಶಪಿಸುವಂತಾಗಿದೆ. ಮೂಲ್ಕಿ ಹೋಬಳಿಯ ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಳೆಯ ನೀರು ನಿಂತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

11mlk1
ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66ರ ಬಳಿಯೇ ಇದೆ. ಈ ರಸ್ತೆಯು ಕಿನ್ನಿಗೋಳಿ ಹಾಗೂ ಹಳೆಯಂಗಡಿ ಒಳಪೇಟೆಗೆ ತಿರುಗುತ್ತದೆ. ಆದರೆ ಜಂಕ್ಷನ್ನ ಮುಖ್ಯ ಕಟ್ಟಡವೊಂದರ ಮುಂಭಾಗ ಭಾರೀ ಗಾತ್ರದ ಹೊಂಡ ನಿರ್ಮಾಣವಾಗಿ ಮಳೆ ಜೋರಾಗಿ ಸುರಿಯುವಾಗ ರಸ್ತೆ ಯಾವುದು, ಗುಂಡಿ ಯಾವುದು ಎಂದು ತಿಳಿಯದೆ ಜನರು, ವಾಹನ ಸವಾರರು ಪರದಾಡುತ್ತಾರೆ. ಜೂನ್ ಪ್ರಾರಂಭವಾಗಿ ಮುಂಗಾರು ಆರಂಭವಾದಂತೆ ನಿಮರ್ಾಣಗೊಳ್ಳುವ ಕೃತಕ ಗುಂಡಿ ಮಳೆ ಮುಗಿಯುವವರೆಗೂ ಹಾಗೇ ಇರುತ್ತದೆ ಎಂದು ಸ್ಥಳೀಯ ಅಂಗಡಿ ಮಾಲೀಕರೊಬ್ಬರು ಹೇಳುತ್ತಾರೆ.
ಈ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಕಳೆದ ಆರೇಳು ವರ್ಷಗಳಿಂದ ಇದರೊಂದಿಗೆ ಇಲ್ಲಿನ ಜನರಿಗೆ ಅಭ್ಯಾಸವಾಗಿ ಬಿಟ್ಟಿದೆ. ಹಳೆಯಂಗಡಿ ಗ್ರಾಮ ಪಂಚಾಯಿತಿಯೂ ಮಳೆ ಬಂದ ನಂತರ ಮೊದಲಿಗೆ ರಸ್ತೆಯ ಗುಂಡಿಗೆ ಕಲ್ಲು ತಂದು ಸುರಿದು ಬಿಡುತ್ತದೆ. ಅದು ಬಿಟ್ಟರೆ ಬೇರೇನೂ ಮಾಡುವುದೂ ಇಲ್ಲ ಹಾಗೂ ಶಾಶ್ವತವಾಗಿ ಪರಿಹಾರವನ್ನು ಕಂಡುಕೊಂಡಿಲ್ಲ. ಇಲ್ಲಿ ಭಾರೀ ಗಾತ್ರದ ಕಲ್ಲು ಸುರಿದಿದ್ದ ಪಂಚಾಯಿತಿಯು ಇನ್ನೊಂದು ಸಮಸ್ಯೆಯನ್ನು ಸೃಷ್ಟಿಸಿದ್ದು ಇದರಿಂದ ಗುಂಡಿ ದೊಡ್ಡದಾಗುತ್ತಾ ಬಂದಿದೆ ಎಂದು ರಿಕ್ಷಾ ಚಾಲಕ ರಾಜೇಶ್ ಹೇಳುತ್ತಾರೆ.
ನಿತ್ಯ ಬಸ್ಸಿನಲ್ಲಿ ಪ್ರಯಾಣಿಸುವ ಮನೋಜ್ ಎಂಬುವವರು ಪತ್ರಿಕೆಗೆ ಪ್ರತಿಕ್ರಿಯಿಸಿ ಹೆದ್ದಾರಿಯ ಪಕ್ಕ ಕಿನ್ನಿಗೋಳಿ-ಕಟೀಲು ಕಡೆ ಸಂಚರಿಸುವ ಖಾಸಗಿ ಸರ್ವೆಸ್ ಬಸ್ಗಳು, ಕಾರ್ಕಳ-ಮಂಗಳೂರು ಮಧ್ಯೆ ಸಂಚರಿಸುವ ಎಕ್ಸ್ಪ್ರೆಸ್ ಬಸ್ಗಳು ಬಂದು ನಿಲ್ಲುತ್ತವೆ ಈ ಬಸ್ಸುಗಳನ್ನು ಹತ್ತಲು ಮೊದಲು ಗುಂಡಿಯಲ್ಲಿ ಇಳಿದು ನಂತರ ಬಸ್ಸನ್ನು ಹತ್ತಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಮಸ್ಯೆಗೆ ಮುಕ್ತಿ ನೀಡಲು ಆಗ್ರಹಿಸಿದ್ದಾರೆ.
ಹಳೆಯಂಗಡಿಯಲ್ಲಿ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು ರಸ್ತೆ ಎತ್ತರವಾಗಿ ಮಧ್ಯೆ ನೀರು ಹರಿಯಲು ಸಾಕಷ್ಟು ಸ್ಥಳಾವಕಾಶವಿಲ್ಲದೆ ರಸ್ತೆ ಬದಿ ನೀರು ಶೇಖರಣೆಗೊಳ್ಳುತ್ತಿದೆ. ಇದು ಕಟ್ಟಡ ಮುಂಭಾಗ ಜನರು ಬಸ್ ಕಾಯುವಲ್ಲಿ ದೊಡ್ಡದಾದ ಹೊಂಡವನ್ನು ತುಂಬುವ ಮೂಲಕ ಕೆರೆಯಂತೆ ಶೋಭಿಸುತ್ತಿದೆ. ಇನ್ನು ಕಿನ್ನಿಗೋಳಿ ಕಡೆಯಿಂದ ಸಾಗಿಬರುವ ವಾಹನಗಳು ಈ ಗುಂಡಿಗೆ ಇಳಿಯುವಾಗ ಕೆಸರು ನೀರು ಮಾರುದೂರ ಹಾರುವುದರಿಂದ ಇಲ್ಲಿ ನಿಂತವರ ಮೇಲೆ ಕೆಸರಿನ ಅಭಿಷೇಕ ತಪ್ಪಿದ್ದಲ್ಲ ಜೊತೆಗೆ ನನ್ನ ಅಂಗಡಿಯವರೆಗೂ ರಾಚುತ್ತದೆ ಎಂದು ಹತ್ತಿರದಲ್ಲಿಯೇ ಇರುವ ಅಂಗಡಿ ಮಾಲೀಕರು ತಿಳಿಸುತ್ತಾರೆ.

1.ರಾಷ್ಟ್ರೀಯ ಹೆದ್ದಾರಿ 66ಕ್ಕೆ ಅನೇಕ ಕಡೆಗಳಲ್ಲಿ ಸರ್ವೆಸ್ ರಸ್ತೆ ನಿರ್ಮಾಣಗೊಂಡಿದ್ದರೆ ಇನ್ನು ಕೆಲವೆಡೆ ಸರ್ವೆಸ್ ರಸ್ತೆ ಇನ್ನೂ ನಿರ್ಮಾ ಣವಾಗಿಲ್ಲ.

2.ಹಳೆಯಂಗಡಿಯಿಂದ ಮೂಲ್ಕಿವರೆಗಿನ ರಸ್ತೆ ಕಾಮಗಾರಿ ಅಲ್ಲಲ್ಲಿ ಕುಂಟುತ್ತಾ ಸಾಗುತ್ತಿದ್ದು, ಸರ್ವೆಸ್ ರಸ್ತೆ ಇನ್ನೂ ನಿರ್ಮಾಣಗೊಂಡಿಲ್ಲ. 3.ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯಲು ನಾಗರಿಕರು ಮುಂದಾದಲ್ಲಿ ಬಹುಕಾಲದ ಸಮಸ್ಯೆ ಪರಿಹಾರವಾಗಲಿದೆ ಎಂಬ ಮಾತು ಕೇಳಿ ಬಂದಿದೆ

By Suddi9

Leave a Reply

Your email address will not be published. Required fields are marked *