ಬಜಪೆ: ಸಾಮಾಜಿಕ ಬದುಕಿಗೆ “ದ್ಯಾರ್ಥಿಗಳು ತೆರೆದುಕೊಳ್ಳಲು ಶಾಲಾ ಸಂಸತ್ತು ಹಾಗೂ ಇತರ ಶೈಕ್ಷಣಿಕ ಸಂಘ-ಚಟುವಟಿಕೆಗಳು ಪೂರಕ ಶಿಸ್ತು, ಸೌಜನ್ಯತೆ ನಾಯಕತ್ವದ ಗುಣಗಳೊಂದಿಗೆ  ವಿದ್ಯಾರ್ಥಿಗಳ ವ್ಯಕ್ತಿತ್ವ ಸಕಾರಾತ್ಮಕವಾಗಿ ರೂಪುಗೊಳ್ಳುತ್ತದೆ. ಎಂದು ದ.ಕ ಮಸ್ಲಿಂ ಲೇಖಕರ ಸಂಘದ ಉಪಾಧ್ಯಕ್ಷ ಬಿ.ಎ.ಮಹಮ್ಮದ್ ಆಲಿ ಹೇಳಿದರು. ಅವರು ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ಇತರ ಸಂಘಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವರ್ತಿಸಿ ಮಾತನಾಡಿದರು.ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಾರದ ಪ್ರಸಾದ್ ಮಾತನಾಡಿ  ಇಂದಿನ ದಿನಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಸೌಲಭ್ಯಗಳು ಲಭ್ಯವಿದ್ದು ಅವುಗಳ ಸದುಪಯೋಗದೊಂದಿಗೆ ಸಂಸ್ಥೆಯ ಶ್ರೇಯಸ್ಸಿಗೆ ಭಾಗಿಗಳಾಗಬೇಕು” ಎಂದು  ವಿದ್ಯಾರ್ಥಿಗಳಿಗೆ ಕರೆ ನೀಡಿದರು.

29 vm ideal
ಎಡಪದವು ಗ್ರಾ.ಪಂ. ಉಪಾಧ್ಯಕ್ಷ ಗಂಗಾಧರ್ ಪೂಜಾರಿ ಅವರು ವಿದ್ಯಾರ್ಥಿಗಳ ಸಂಘ ಚಟುವಟಿಕೆಗಳಿಗೆ ಅಭಿನಂದನೆ ವ್ಯಕ್ತಪಡಿಸಿದರು. ಶಾಲಾ ಸಂಚಾಲಕ ವೈ. ಮಹಮ್ಮದ್ ಬ್ಯಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ವಿಜ್ಞಾನ ಸಂಘದ ಸಂಯೋಜಕ ಸೈಮನ್ ಕಾರ್ಡೋಜಾ ಪರಿಸರ ಸಂಘದ ಸಂಯೋಜಕರಾದ ನೌಶೀದಾ ಸಂಘಗಳ ಚಟುವಟಿಕೆಗಳನ್ನು ವಿವರಿಸಿದರು. ಶಾಲಾ ಮುಖ್ಯ ಶಿಕ್ಷಕಿ ನಂದಾ ಉಮಾಪ್ರಿಯಾ ಗಡಿಯಾರ್ ಸ್ವಾಗತಿಸಿ ವಿದ್ಯಾರ್ಥಿ ಸಂಸತ್ ಪದಾಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಿದರು. ಸಹ ಮುಖ್ಯ ಶಿಕ್ಷಕ ಫೆಲಿಕ್ಸ್ ಸಿಕ್ವೇರಾ, ಶಾಲಾ ಪ್ರಬಂಧಕಿ ಪ್ಲೊಸಿ ತಾವ್ರೋ ಉಪಸ್ಥಿತರಿದ್ದರು. ಶಿಕ್ಷಕಿ ಸುಮತಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *