ಬಂಟ್ವಾಳ: ಬಂಟ್ವಾಳ ಪೇಟೆ ಹಾಗೂ ಬಡ್ಡಕಟ್ಟೆ ಜಂಕ್ಷನ್ನಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರು, ರಿಕ್ಷಾ ಚಾಲಕ- ಮಾಲಕರು, ವರ್ತಕರು ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ಮಂಗಳವಾರ ಬಂಟ್ವಾಳ ಪೇಟೆಯ ಹೊಟೇಲ್ ಚಂದ್ರವಿಲಾಸ ಸಭಾಂಗಣದಲ್ಲಿ ನಡೆಯಿತು.
ಅಂಗಡಿಗಳಿಗೆ ಸರಕು ಹೊತ್ತು ತರುವ ವಾಹನಗಳು ಗಂಟೆಗಟ್ಟಲೆ ಲೋಡ್-ಅನ್ಲೊಡಿಂಗ್ ಮಾಡುವುದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಂ ಉಂಟಾಗುತ್ತಿದೆ. ಅಲ್ಲದೆ ಅಂಗಡಿಗಳಿಗೆ ಬರುವ ಗ್ರಾಹಕರಿಗೆ ವಾಹನ ಪಾಕರ್ಿಂಗ್ ಮಾಡಲು ಸರಿಯಾದ ಪಾಕರ್ಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ, ಅಂಗಡಿ ಮುಂಭಾಗ ರಸ್ತೆಯಲ್ಲಿಯೇ ಪಾಕರ್ಿಂಗ್ ಮಾಡುವುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಟ್ರಾಫಿಕ್ ಜಾಮ್ ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಸಲಹೆ ಸಭೆಯಲ್ಲಿ ಕೇಳಿ ಬಂತು.

1 (12) 2 (12) 3 (14)
ಈ ಬಗ್ಗೆ ಈ ಹಿಂದೆಯೇ ಅನಿಲ್ ಕುಲಕಣರ್ಿಯವರು ಪೊಲೀಸ್ ವೃತ್ತ ನಿರೀಕ್ಷರಾಗಿದ್ದಾಗ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಯಾವುದು ಅನುಷ್ಠಾನಕ್ಕೆ ಬಂದಿಲ್ಲ. ಸಭೆ ನಡೆದ ಆರಂಭದ ದಿನದಲ್ಲಿ ಪೇಟೆಯಲ್ಲಿ ಪಹರೆಯಲ್ಲಿದ್ದ ಪೊಲೀಸರು ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು. ಆದರೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಯಾವುದೋ ವಿಷಯಕ್ಕೆ ಉಂಟಾದ ಮನಸ್ತಾಪದಿಂದ ಪೊಲೀಸ್ ಪಹರೆಯೂ ಆ ಬಳಿಕ ಇಲ್ಲದಂತಾಗಿದೆ. ಮತ್ತೆ ಅದೇ ವಿಷಯವನ್ನು ಚಚರ್ೆ ಮಾಡುವ ಬದಲು ಈ ಹಿಂದಿನ ಸಭೆಯ ನಿರ್ಣಯವನ್ನು ನೋಡಿ ಅದನ್ನೇ ಅನುಷ್ಠಾನ ಮಾಡುವ ಅಥವಾ ಅದಕ್ಕೆ ಬದಲಾವಣೆ ಇದ್ದರೆ ಸೂಚಿಸುವ ಎಂದು ಸ್ವಣೋದ್ಯಮಿ ಸುರೇಶ್ ಬಾಳಿಗಾ ಸಲಹೆ ನೀಡಿದರು. ಬಂಟ್ವಾಳ ಪೇಟೆಯಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆಯಿಂದ ಸಾರ್ವಜನಿಕರಿಗಾಗುತ್ತಿರುವ ತೊಂದರೆಯ ಬಗ್ಗೆ ವಿಶ್ವನಾಥ ಚೆಂಡ್ತಿಮಾರ್ ಗಮನ ಸೆಳೆದರು. ಕೆಲ ಕಾಲ ಚಚರ್ೆ ನಡೆದು ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಗಮನದಲ್ಲಿಟ್ಟುಕೊಂಡು ಈ ಸಭೆಯಲ್ಲಿ ಚಚರ್ಿಸಲಾದ ವಿಷಯಗಳನ್ನು ಸೇರಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು . ಪುರಸಭೆಯೊಂದಿಗೆ ಚಚರ್ಿಸಿ , ಪಾಕರ್ಿಂಗ್ಗೆ ಸೂಕ್ತ ಸ್ಥಳವನ್ನು ಗುರುತಿಸಿ ಮತ್ತೆ 15 ದಿನಗಳ ಬಳಿಕ ಸಭೆ ನಡೆಸಿ ಶಾಶ್ವತ ಪರಿಹಾರ ಕೈಗೊಳ್ಳಲು ಬಗ್ಗೆ ಸಭೆ ತೀಮರ್ಾನ ಕೈಗೊಂಡಿತು.
ಡಿವೈಎಸ್ಪಿ ರಶ್ಮಿ ಪರಡಿ, ವೃತ್ತ ನಿರೀಕ್ಷಕ ಬೆಳಿಯಪ್ಪ, ನಗರ ಠಾಣೆ ಎಸೈ ನಂದ ಕುಮಾರ್ ಪುರಸಭಾ ಅಧ್ಯಕ್ಷೆ ವಸಂತಿ, ಆರೋಗ್ಯ ನಿರೀಕ್ಷಕ ರಾಜಶೇಖರ್ ವೇದಿಕೆಯಲ್ಲಿದ್ದರು.

By Suddi9

Leave a Reply

Your email address will not be published. Required fields are marked *