ಯೇನೆಪೋಯ ವಿಶ್ವವಿದ್ಯಾಲಯದ ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಯೇನೆಪೋಯ ವಿವಿ ಕುಲಸಚಿವ ಡಾ. ಸಿ.ವಿ.ರಘುವೀರ್ ಹಾಗು ಹೆಚ್ಚುವರಿ ಕುಲಸಚಿವರಾದ ಡಾ. ಶ್ರೀಕುಮಾರ್ ಮೆನನ್ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

DSC_0568

DSC_0856

ಪರಿಸರ ಅಧ್ಯಯನ ಕೇಂದ್ರದ ಸಿಬ್ಬಂದಿಗಳಿಂದ ಸಂಪಿಗೆ, ಹೆಬ್ಬಲಸು ಹಾಗು ಬೀಟಿ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ತರಕಾರಿ ಬೀಜಗಳನ್ನು ಬಿತ್ತುವ ಮೂಲಕ ಈ ವರ್ಷದ ತರಕಾರಿ ತೋಟದ ಕಾರ್ಯವನ್ನು ಆರಂಭಿಸಿದರು. ಬದನೆ, ಅಲಸಂಡೆ, ಬೆಂಡೆಕಾಯಿ ಹಾಗು ಮೆಣಸಿನ ಬೀಜಗಳನ್ನು ಬಿತ್ತಲಾಯಿತು. ವಿಶ್ವವಿದ್ಯಾಲಯದ ಆವರಣದಲ್ಲಿ ಸುಮಾರು 308 ಪ್ರಭೇದದ ಗಿಡಗಳಿದ್ದು, ಇದರ ಸಂರಕ್ಷಣೆಯನ್ನು ಮಾಡುತ್ತಿರುವ ತೋಟಗಾರಿಕ ಸಹಾಯಕರಾದ ವಸಂತ್ ಅವರ ಕಾರ್ಯವನ್ನು ಡಾ. ಸಿ.ವಿ.ರಘುವೀರ್ರವರು ಪ್ರಶಂಸಿಸಿದರು.

By suddi9

Leave a Reply

Your email address will not be published. Required fields are marked *