ಕಿನ್ನಿಗೋಳಿ: ಬಸ್ಸು ಮತ್ತು ಲಾರಿ ಮುಖಾಮುಖಿ ಡಿಖ್ಖಿ ಹೊಡೆದು ಚಾಲಕರಿಬ್ಬರು ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ಶುಕ್ರವಾರ ಮದ್ಯಾಹ್ನ ಕಟೀಲು ಸಮೀಪದ ಬಲ್ಲಾಣ ತಿರುವಿನಲ್ಲಿ ನಡೆದಿದೆ. ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ ಸಂಚಾರಿಸುತ್ತಿದ್ದ ಲಾರಿ ಮತ್ತು ಕಟೀಲು ಕಡೆಯಿಂದ ಬರುತ್ತಿದ್ದ ಬಸ್ಸು ಕಟೀಲು ಸಮೀಪದ ಬಲ್ಲಾಣ ತಿರುವಿನಲ್ಲಿ ಮೂಖಾಮುಖಿ ಡಿಕ್ಕಿ ಹೊಡೆದಿದ್ದು, ಚಾಲಕರು ಮತ್ತು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸಿನ ಮುಂಭಾಗ ನುಜ್ಜು ಗುಜ್ಜಾಗಿದೆ ಬಜಪೆ ಠಾಣಾ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶವು ಅತ್ಯಂತ ಇಕ್ಕಾಟಗಿದ್ದು ಈ ಹಿಂದೆಯೂ ಇಲ್ಲಿ ಹಲವು ಅಪಘಾತಗಳು ನಡೆದಿದ್ದು, ಒಂದು ವರ್ಷದ ಹಿಂದೆ ಈಜಾಗದಲ್ಲಿ ಬಸ್ಸೊಂದು ಕಂದಕಕ್ಕೆ ಬಿದ್ದ ಘಟನೆ ನಡೆದಿದೆ.



