ಕೈಕಂಬ:ಮಕ್ಕಳೆ ಎದ್ದೇಳಿರಿ ಜಾಣರೇ ಸದ್ದು ಮಾಡಿರಿ ಎಂಬ ಹಾಡನ್ನು ಹಾಡುತ್ತಾ ಮಕ್ಕಳ ಹಕ್ಕುಗಳ ಬಗ್ಗೆ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಕಲ್ಲಾಡಿ ಇಲ್ಲಿಯ ಮಕ್ಕಳ ಹಕ್ಕುಗಳ ಸಂಘದ ಸದಸ್ಯರು ತಮ್ಮ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿದರು. ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್ಡಬ್ಲ್ಯೂಸಿ ಯೋಜನೆಯಡಿಯಲ್ಲಿ ಆಯ್ದ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಸಂಘವು ರಚನೆ ಗೊಂಡಿದ್ದು ಮಕ್ಕಳಿಗೆ ಹಕ್ಕುಗಳನ್ನು ಹಾಡು, ನೃತ್ಯ, ಕಿರುಪ್ರಹಸನ ಮುಖಾಂತರ ತರಬೇತಿ ನೀಡಿ ಮನದಟ್ಟಾಗುವಂತೆ ತಿಳಿಸಲು ಸಂಪನ್ಮೂಲ ವ್ಯಕ್ತಿಗಳಾಗಿ ಮೌನೇಶ್ ವಿಶ್ವಕರ್ಮ ಹಾಗೂ ದಿನೇಶ್ ಅತ್ತಾವರ ಇವರನ್ನು ಅಹ್ವಾನಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಯೋಜನೆಯ ಸಂಯೋಜಕರಾದ ವಿಲಿಯಂ ಸಾಮ್ಯುವೆಲ್ ಬಾಲ್ಯವಿವಾಹದ ವಿರುದ್ಧ ದನಿ ಎತ್ತಲು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವರ್ಗದವರು ಇಂತಹ ತರಬೇತುಗಳು ಮಕ್ಕಳಿಗೆ ಅತ್ಯಗತ್ಯ ಎಂದು ನುಡಿದರು. ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಮಕ್ಕಳ ಹಕ್ಕುಗಳ ಸಂಘದ ಸದ್ಯಸ್ಯರೆ ನಿರ್ವಹಿಸಿದರು. ಕೈಕಂಬ ವಲಯ ಸಂಯೋಜಕರಾದ ಈಶ್ವರ ನಾಯ್ಕ್ ಹಾಗೂ ಕಾರ್ಯಕರ್ತೆ ಯರದ ಸೀತಾಲಕ್ಷ್ಮೀ ಹಾಗೂ ಪಾಲಾಕ್ಷಿ ಉಪಸ್ಥಿತರಿದ್ದರು.


