ಮಂಗಳೂರು: ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ಸೊಂದು ಚಲಿಸಿ ಅಂಗಡಿಯೊಂದಿಗೆ ನುಗ್ಗಿದ ಘಟನೆ ನಗರದ ಸ್ಟೇಟ್ ಬ್ಯಾಂಕ್ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಂಗಡಿ ಹಾಗೂ ಬಸ್ಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.ಜೋಕಟ್ಟೆ -ಸ್ಟೇಟ್ ಬ್ಯಾಂಕ್ ರಸ್ತೆಯಾಗಿ ಚಲಿಸುವ 2ಸಿ ನಂಬರ್ ಬಸ್ ಅಂಗಡಿಗೆ ಡಿಕ್ಕಿಯಾದ ಬಸ್ಸಾಗಿದೆ. ಇಂದು ಬೆಳಗ್ಗೆ ಬಸ್ ಚಾಲಕ ಹಾಗೂ ನಿರ್ವಾಹಕ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸಿದ್ದರು.


ಈ ಸಂದರ್ಭ ಬಸ್ ಏಕಾ ಏಕಿ ತನ್ನಿಂದ ತಾನೇ ಮುಂದಕ್ಕೆ ಚಲಿಸಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಬೆಳಗ್ಗಿನ ಸಂದರ್ಬವಾಗಿದ್ದರಿಂದ ನಿಲ್ದಾಣದಲ್ಲಿ ಕಡಿಮೆ ಜನಸಂಖ್ಯೆ ಇದ್ದುದರಿಂದಾಗಿ ಯಾವುದೇ ಜೀವಪಾಯ ಉಂಟಾಗಿಲ್ಲ ಸಾಮಾನ್ಯವಾಗಿ ಈ ಭಾಗದಲ್ಲಿ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿ ಬಸ್ಗೆ ಕಾಯುತ್ತಿದ್ದರು. ಆದರೆ ಇಂದು ಈ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಇಲ್ಲದೇ ಇದ್ದುದರಿಂದಾಗಿ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ.
