ಮಂಗಳೂರು: ಮರವೂರು ಡ್ಯಾಂಬ ಬಳಿ ನೀರುಪಾಲಾಗಿದ್ದ ಬಿಜೈ ರಾಜನ ಕೊಲೆ ಆರೋಪಿಗಳಾದ ಕಾವೂರು ವಿದ್ಯಾನಗರ ನಿವಾಸಿ ಜೈಸನ್ ಡಿಸೋಜಾ(24) ಹಾಗೂ ಕಾವೂರು ಪಂಜಿಮೊಗರು ನಿವಾಸಿ ಅವಿನಾಶ್(26) ಎಂಬಾತನ ಶವ ಪಣಂಬೂರಿನ ತಣ್ಣೀರು ಬಾವಿ ಹೊಳೆಯಲ್ಲಿ ಪತ್ತೆಯಾಗಿದೆ.

body 1
ಕಳೆದ ಮಂಗಳವಾರ ಸಂಜೆ ಬಜ್ಪೆ ಸಮೀಪದ ಮರವೂರು ಸಮೀಪದ ವೆಂಟೆಡ್ ಡ್ಯಾಂ ಬಳಿ ಮೀನು ಹಿಡಿಯಲು ತೆರಳಿದ್ದ ವೇಳೆ ಇವರಿಬ್ಬರು ನೀರುಪಾಲಾಗಿದ್ದು ಈತನ ಉಳಿದ ಆರು ಮಂದಿ ಸಹವತರ್ಿಗಳಿಗೆ ಅವರನ್ನು ಮೇಲಕ್ಕೆತ್ತಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಮಂಗಳವಾಋ ಸಂಜೆಯಿಂದ ಇಂದಿನ ತನಕ ಬಜ್ಪೆ, ಅದ್ಯಪಾಡಿ, ಮರವೂರು, ಪಣಂಬೂರು ಸುತ್ತೆಲ್ಲಾ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಶೋದ ನಡೆಸಲಾಗುತ್ತಿತ್ತು. ಈ ವೇಳೆ ಜೈಸನ್ ಹಾಗೂ ಅವಿನಾಶ್ ಶವ ಪಣಂಬೂರು ತಣ್ಣೀರುಬಾವಿ ಬೀಚ್ ಬಳಿ ಪತ್ತೆಯಾಗಿದೆ. ಪಣಂಬೂರು ಠಾಣಾ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ವೆನ್ಲಾಕ್ ಶವಾಗಾರಕ್ಕೆ ಸಾಗಿಸಿದ್ದಾರೆ.

By suddi9

Leave a Reply

Your email address will not be published. Required fields are marked *