ಕೈಕಂಬ:ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ, ಗಂಜಿಮಠ ಮತ್ತು ಕಲಾವರ್ಧಕ ಯುವಕ ಮಂಡಲ(ರಿ)ನಾರಳ ಸಂಕೇಶ ಇವರ ಜಂಟಿ ಆಶ್ರಯದಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಬೃಹತ್ ಆರೋಗ್ಯ ಶಿಬಿರವು ಜು.3 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ವಿದ್ಯಾಭಾರತಿ ಸಭಾಭವನ, ಮೊಗರು ಕುಕ್ಕಟ್ಟೆಯಲ್ಲಿ ನಡೆಯಲಿದೆ..ಶಿಬಿರದ ಉದ್ಘಾಟನೆಯನ್ನು ವಾರ್ತೆ.ಕಾಮ್ ಪ್ರಧಾನ ಸಂಪಾದಕರು ಹರೀಕ್ ಕೆ.ಆದೂರ್ ಉದ್ಘಾಟಿಸಲಿರುವರು. ಆಶೀರ್ವಚನವನ್ನು ಶ್ರೀ ಕ್ಷೇತ್ರ ಕೇಮಾರು ಈಶ ವಿಠಲದಾಸ ಸ್ವಾಮೀಜಿ ಮಾಡಲಿರುವರು. ಅಧ್ಯಕ್ಷತೆಯನ್ನು ಉಳಿಪಾಡಿಗುತ್ತು ಪ್ರಗತಿಪರ ಕೃಷಿಕ ಒಡ್ಡೂರು ಫಾರ್ಮ್ ರಾಜೇಶ್ ನಾಯ್ಕ್ ವಹಿಸಲಿರುವರು. ಉದ್ಯಮಿ ಕರುಣಾಕರ ಶೆಟ್ಟಿ, ಗಂಜಿಮಠ ಗ್ರಾ.ಪಂ.ಅಧ್ಯಕ್ಷೆ ಮಾಲತಿ, ಮೊಗರು ಕುಕ್ಕಟ್ಟೆ ನಿವೃತ್ತ ಮುಖ್ಯೋಪಾಧ್ಯಾಯ ಅಣ್ಣಯ್ಯ ಎಂ, ಮುಖ್ಯ ಕಾರ್ಯನಿರ್ವಾಣಾಧಿಕಾರಿ, ಪ್ರಸನ್ನ ಆರ್ಯುವೇದ ಕಾಲೇಜ್ ಮತ್ತು ಆಸ್ಪತ್ರೆ ಬೆಳ್ತಂಗಡಿ ಡಾ.ಶ್ರೀ ಕುಮಾರ್, ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜಿಮಠ ಡಾ. ಸತೀಶ ಶಂಕರ ಬಿ., ಕಲಾವರ್ಧಕ ಯುವಕ ಮಂಡಲ(ರಿ) ನಾರಳ ಸಂಕೇಶ್ ಇದರ ಅಧ್ಯಕ್ಷರು, ಉಪಾಧ್ಯಕ್ಷರು. ಉಪಸ್ಥಿತರಿರುವರು.

