ಬಂಟ್ವಾಳ : ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಶಾಂತಿನಗರ ಸಜಿಪಮುನ್ನೂರು ನಲ್ಲಿ ಸಜಿಪಮೂಡ ಅನ್ನಂಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಮೊಕ್ತೇಸರರಾದ ಪ್ರೇಮಾ ಜಿ.ಶೆಟ್ಟಿ ನೀಡಿರುವ ವಿದ್ಯಾರ್ಥಿವೇತನವನ್ನು ಎಂ.ಸುಬ್ರಹ್ಮಣ್ಯ ಭಟ್ ವಿತರಿಸಿದರು. ಕಾರ್ಯಕ್ರಮದಲ್ಲಿ ಎಸ್.ಲಿಂಗಪ್ಪ ಮೂಲ್ಯ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮ , ಮುಖ್ಯೋಪಾಧ್ಯಾಯಿನಿ ಸುಪ್ರಭಾ, ವಿಜಯಾಪ್ರಭು, ಮಮತಾ ಕಿರಣ್ ಕೆ. ಉಪಸ್ಥಿತರಿದ್ದರು.

