ಗುಜರಾತ್: ಜೂ.20: ಭಾರತ್ ಅಂದರೆ ವಿಜಯೋತ್ಸವದ ಸಂಕೇತ ಮತ್ತು ಸಂದೇಶವಾಗಿದೆ. ಜಯ ಅಂದರೆ ಯಶಸ್ಸು ಮತ್ತು ಲಕ್ಷ್ಮೀ ಎಂದರೆ ಸಂಪತ್ತು. ಇವೆರಡಕ್ಕೂ ಪ್ರಾಮಾಣಿಕರಾಗಿ ಬಿಲ್ಲವ ಸಮುದಾಯ ಮತ್ತು ಭಾರತ್ ಬ್ಯಾಂಕ್ ಸೇವೆ ಬದ್ಧವಾಗಿರುವುದಕ್ಕೆ ಈ 92ರ ಶಾಖೆಯೇ ಸಾಕ್ಷಿ. ಸಾವಿರಾರು ಮೈಲು ದೂರ ಪಯಣಿಸಿ ಕರ್ಮಭೂಮಿ ಮುಂಬಯಿ ಸೇರಿದ ಬಿಲ್ಲವರ ಸ್ಥಾಪನೆಯ ಬ್ಯಾಂಕ್ ಮೂಲಕ ಬಿಲ್ಲವರ ಅಸ್ಮಿತೆ ಜಗಕ್ಕೆ ಗುರುತರವಾಗಿರುವುದು ಅಭಿನಂದನೀಯ. ಈ ಬ್ಯಾಂಕ್ ರಾಷ್ಟ್ರವ್ಯಾಪಿ ಪಸರಿಸಿ ಆ ಮೂಲಕ ಭಾರತೀಯ ಸಮೂದಾಯಕ್ಕೆ ಬಲ ತುಂಬಲಿ ಎಂದು ಬಿಲ್ಲವ ಸಂಘ ಗುಜರಾತ್ ಅಧ್ಯಕ್ಷ ಮೋಹನ್ ಸಿ.ಪೂಜಾರಿ ತಿಳಿಸಿದರು.
ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಯು ತನ್ನ 92ನೇ ಶಾಖೆಯನ್ನು ಅಹಮ್ಮದಬಾದಿನಲ್ಲಿ ಸೋಮವಾರ ನಗರದ ವಸ್ತ್ರಪುರ್ ಜಡ್ಜಸ್ ಬಂಗಲೋ ರಸ್ತೆಯಲ್ಲಿನ ಅಭಿಶ್ರೀ ಅದ್ರಿಓಟ್ ಕಟ್ಟಡದಲ್ಲಿ ಸೇವಾರಂಭದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ವಿಧ್ಯುಕ್ತವಾಗಿ ಶಾಖೆಯನ್ನು ಸೇವಾರ್ಪಣೆ ಗೊಳಿಸಿ ಮೋಹನ್ ಪೂಜಾರಿ ಮಾತನಾಡಿದರು.
ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ರಿಬ್ಬನ್ ಬಿಡಿಸಿ ನೂತನ ಶಾಖೆಗೆ ಚಾಲನೆ ನೀಡಿದರು. ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲ್ಯಾನ್ ಎಟಿಎಂ ಸೇವೆ, ಬ್ಯಾಂಕ್ನ ಹಿರಿಯ ನಿರ್ದೇಶಕಿ ಪುಷ್ಫಲತಾ ಎನ್.ಸಾಲ್ಯಾನ್ ಲಾಕರ್ ಸೇವೆಗೆ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಸೇವೆಗಳಿಗೆ ಚಾಲನೆಯನ್ನೀಡಿ ಶಾಖೆಯ ಸರ್ವೋನ್ನತಿಗೆ ಶುಭ ಕೋರಿದರು.
ಗೌರವ್ವಾನಿತ ಅತಿಥಿಗಳಾಗಿ ಬಿಲ್ಲವ ಸಂಘ ಬರೋಡಾ ಅಧ್ಯಕ್ಷ ದಯಾನಂದ ಬೋಂಟ್ರಾ, ಸೂರತ್ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್ ಎಂ.ಪೂಜಾರಿ, ವೇಣುಗೋಪಾಲ್ ಬೋಂಟ್ರಾ, ಲಕ್ಷ್ಮಣ ಪೂಜಾರಿ, ಎಂ.ಎಸ್.ರಾವ್ ಅಹ್ಮದಾಬಾದ್, ಧರ್ಮೇ ಶ್ ಎಸ್.ಸಾಲ್ಯಾನ್, ಲೋಕಯ್ಯ ಪೂಜಾರಿ, ಮನೋಜ್ ಪೂಜಾರಿ ಅಹ್ಮದಾಬಾದ್, ವಿ.ಡಿ ಅಮೀನ್, ಸುರೇಶ್ ಕುಮಾರ್ ಪೂಜಾರಿ ಮುಲುಂಡ್, ರತ್ನಾ ಸುರೇಶ್ ಕುಮಾರ್, ಸುಮನ್ಲಾಲ್ ಕೋಡಿಯಾಳ್ಬೈಲ್, ಭಾರತಿ ಶೆಟ್ಟಿ, ದೇವದತ್ತ ಶೆಟ್ಟಿ, ಆನಂದ್ ಜೆಟ್ಟಾ, ಜಯರಾಮ ಶೆಟ್ಟಿ, ಶ್ರಿನಿತ್ ತ್ರಿವೇದಿ, ಸದಾಶಿವ ಜಿ.ಪೂಜಾರಿ ವಾಪಿ, ವಾಸು ಪೂಜಾರಿ ಬರೋಡಾ ಹಾಗೂ ಬ್ಯಾಂಕ್ನ ಅಭಿವೃದ್ಧಿಯ ಸುನೀಲ್ ಗುಜರನ್, ವಿಜಯ ಪಾಲನ್, ಬರೋಡಾ ಶಾಖೆಯ ಮುಖ್ಯಸ್ಥ ಮೋಹನ್ದಾಸ್ ಹೆಚ್ ಪೂಜಾರಿ, ವಾಪಿ ಶಾಖೆಯ ಮುಖ್ಯಸ್ಥ ಸುರೇಶ್ ಎಸ್.ಬಂಗೇರಾ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಶುಭಕೋರಿದರು.
ದಯಾನಂದ ಬೋಂಟ್ರಾ ಮಾತನಾಡಿ ಭಾರತ್ ಬ್ಯಾಂಕ್ ಬಿಲ್ಲವ ಸಮಾಜದ ಹಿರಿಮೆಯಾಗಿದೆ. ಕರ್ನಾಟಕ ಕರಾವಳಿಯ ಬಹುಸಂಖ್ಯಾತ ಬಿಲ್ಲವರ ಸಂಸ್ಥಾಪನೆಯ ಈ ಬ್ಯಾಂಕ್ನ ವಿಶ್ವಾಸನೀಯ ಸೇವೆಯೇ ಗುಜರಾತ್ನಲ್ಲಿನ ನಾಲ್ಕನೇ ಶಾಖೆಯ ಲೋಕಾರ್ಪಣೆಗೆ ಸಾಕ್ಷಿಯಾಗಿದೆ ಎಂದರು.
ಮಹಾರಾಷ್ಟ್ರಕ್ಕಿಂತ ಗುಜರಾತ್ನತ್ತ ಜಾಸ್ತಿ ಗಮನ ಹರಿಸಿ ಇಲ್ಲಿನ ಜನತೆಯ ಅಶೋತ್ತರಗಳಿಗೆ ಸ್ಪಂದಿಸಿ. ಇಲ್ಲಿನ ಜನತೆ ನಿಮ್ಮೊಂದಿಗೆ ಸದಾ ಸ್ಪಂದಿಸಲಿದೆ ಎಂದು ಉದ್ಯಮಿ ರಾಜ್ ಕುಮಾರ್ ರೈ ಎಂದರು.
ನ್ಯಾ.ಎಲ್.ಆರ್ ಪೂಜಾರಿ ಮಾತನಾಡಿ ಅವಿಭಜಿತ ದ.ಕ ಜಿಲ್ಲಾ ಜನತೆ ಆರ್ಥಿಕ ಸುಧಾರಣೆಯ ರೂವಾರಿಗಳಾಗಿದ್ದಾರೆ. ಹಣಕಾಸು ಸೇವೆಗೆ ಅಲ್ಲಿನ ದಿಗ್ಗಜರ ಕೊಡುಗೆ ವಿಶ್ವಪ್ರಸಿದ್ಧಿ ಪಡೆದಿದೆ. ಅದರಲ್ಲಿ ಭಾರತ್ ಬ್ಯಾಂಕ್ ಕೂಡಾ ಒಂದಾಗಿದೆ.
ಒಂದು ಸಮುದಾಯದಿಂದ ರೂಪಿಸಲ್ಪಟ್ಟ ಈ ಬ್ಯಾಂಕ್ ರಾಷ್ಟ್ರದ ಸಮಗ್ರ ಜನತೆಯ ಸೇವೆಯಲ್ಲಿ ನಿರತವಾಗಿರುವುದು ಶ್ಲಾಘನೀಯ. ಜಯ ಸುವರ್ಣರ ಸ್ಪೂರ್ಥಿ ದಾಯಕ ಸೇವೆ ಗಮನೀಯ. ಅವರೋರ್ವ ಹಣಕಾಸು ವ್ಯವಸ್ಥೆಯ ಶಕ್ತಿಯಾಗಿ ಎಲ್ಲರಿಗೂ ಅನುಕರಣೀಯ ಎಂದು ನಾರಾಯಣ ರೈ ತಿಳಿಸಿದರು.
ಋಷಿ ಕೆ.ಎಸ್, ಚಂಪಲಾಲ್ ಜೆಟ್ಟಾ, ರವಿರಾಜ್ ಶೆಟ್ಟಿ, ಕೆ.ವಿಶ್ವನಾಥ್, ಜಿಗ್ನೇಶ್ ಶ್ಹಾ ಸಂದರ್ಭೋಚಿತವಾಗಿ ಮಾತನಾಡಿ ಶುಭಾರೈಸಿದರು.
ಕಾರ್ಯಾಧ್ಯಕ್ಷ ಜಯ ಸುವರ್ಣ, ರೋಹಿಣಿ ಸಾಲ್ಯಾನ್, ಸಿ.ಆರ್ ಮೂಲ್ಕಿ, ಬ್ಯಾಂಕ್ನ ನಿರ್ದೇಶಕರುಗಳಾದ ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ, ಮಾಜಿ ನಿರ್ದೇಶಕ ಎನ್.ಎಂ ಸನೀಲ್, ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್, ನಿವೃತ್ತ ಮಹಾ ಪ್ರಂಬಧಕಿ ಶೋಭಾ ದಯಾನಂದ್ ಅವರು ಶಾಖೆಯ ಮುಖ್ಯಸ್ಥ ಹರೀಶ್ ವಿ.ಪೂಜಾರಿ, ಸಹಾಯಕ ಪ್ರಬಂಧಕ ಪ್ರವೀಣ್ ಕರ್ಕೇರ, ಚೇತನಾ ಎಸ್.ಪೂಜಾರಿ, ಬಿಂಕಿತಾ ರಾವ್, ಕವಿತಾ ಮೊನ್ಚಂದನ್, ದನಂಜಯ ಜಿ.ಪಾಲನ್ ಅವರಿಗೆ ಪುಷ್ಫಗುಪ್ಚವನ್ನೀಡಿ ಶುಭಾರೈಸಿದರು. ಅಂತೆಯೇ ಮೋಹನ್ ಸಿ.ಪೂಜಾರಿ ಮತ್ತು ಸುನಂದ ಎಂ.ಪೂಜಾರಿ ದಂಪತಿಯನ್ನು ಜಯ ಸುವರ್ಣರು ಸನ್ಮಾನಿಸಿ ಅಭಿವಂದಿಸಿದರು.
ಉಳ್ಳೂರು ಶೇಖರ್ ಶಾಂತಿ ಮತ್ತು ಉಳ್ಳೂರು ಧನಂಜಯ್ ಶಾಂತಿ ವಾಸ್ತುಪೂಜೆ, ವಾಸ್ತು ಬಲಿ, ವಾಸ್ತುಹೋಮ, ಗಣಹೋಮ, ಲಕ್ಷ್ಮೀಸತ್ಯನಾರಾಯಣ ಪೂಜೆ, ದ್ವಾರಪ್ರವೇಶ ಪೂಜೆ ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಚೇತನಾ ಎಸ್.ಪೂಜಾರಿ ಹಾಗೂ ಹರೀಶ್ ವಿ.ಪೂಜಾರಿ ಮತ್ತು ಮಾಯಾ ಹರೀಶ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು. ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿದರು. ಕು. ಋಷಿಕಾ ಜಿ.ಜೋಶಿ ಗುಜರಾತಿಯಲ್ಲಿ ಬ್ಯಾಂಕ್ನ ಸೇವಾ ವೈಖರಿಯನ್ನು ಪ್ರಸ್ತಾಪಿಸಿ ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಹರೀಶ್ ವಿ.ಪೂಜಾರಿ ಕೃತಜ್ಞತೆ ಸಲ್ಲಿಸಿದರು.
ಚಿತ್ರ . ವರದಿ : ರೋನ್ಸ್ ಬಂಟ್ವಾಳ್












