ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ ನಲ್ವತ್ತನೇ ವಾರ್ಷಿಕ ಮಹಾಸಭೆಯನ್ನು ಇಂದಿಲ್ಲಿ ಶನಿವಾರ ಸಂಜೆ ಗೋರೆಗಾಂವ್ ಪೂರ್ವದ ಬ್ರಿಜ್ವಾಸಿ ಪ್ಯಾಲೇಸ್ ಸಭಾಗೃಹದಲ್ಲಿ ಜರುಗಿಸಿತು. ಮಾತೃ ಸಂಸ್ಥೆ ಬಿಲ್ಲವರ ಅಸೋಸಿ ಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ದೀಪಹಚ್ಚಿ ಮಹಾಸಭೆಗೆ ಚಾಲನೆಯನ್ನಿತ್ತರು. ನಂತರ ಬ್ಯಾಂಕ್ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ತಮ್ಮ ಘನಾಧ್ಯಕ್ಷತೆಯಲ್ಲಿ ಮಹಾಸಭೆಯನ್ನು ನಡೆಸಿದರು.
ಎಂದು ಸಭಾಗೃಹದಲ್ಲಿ ನಿರೀಕ್ಷೆಗೂ ಮಿಕ್ಕಿ ಕಿಕ್ಕಿರಿದು ತುಂಬಿದ್ದ ಸದಸ್ಯರನ್ನುದ್ದೇಶಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದ ಜಯ ಸುವರ್ಣರು ಜಾಗತಿಕ ಚಿತ್ರಣ, ಭಾರತೀಯ ಮಿತವ್ಯಯ, ಹಣಕಾಸು ಕಾರ್ಯ ನಿರ್ವಹಣೆ, ಲಾಭ, ತೆರಿಗೆಗಳ ಅವಕಾಶಗಳು, ಹಿಶೆಲಾಭಾಂಶ, ವಾರ್ಷಿಕ ಪುರಸ್ಕಾರ ಗೌರವಗಳು, ಸದಸ್ಯತ್ವ, ಶಾಖೆಗಳ ವಿಸ್ತರಣೆ, ಶಾಖೆಗಳ ಆರ್ಥಿಕ ವ್ಯವಹಾರದ ವಿಸ್ತರಣಾ ವ್ಯಾಪ್ತಿ, ಠೇವಣಿ ವಿಮೆ, ಠೇವಣಾಭಿವೃದ್ಧಿ, ಮುಂಗಡ, ಸಾಲ ಮತ್ತು ಮುಂಗಡ ವಸೂಲಿ, ನಿಷ್ಕಾರ್ಯತಾ ಆಸ್ತಿ, ವಿದೇಶಿ ವಿನಿಮಯ ವ್ಯವಹಾರ, ಖಜಾನೆ, ವಿಮಾ ವ್ಯವಹಾರ, ಪ್ಯಾನ್ಕಾರ್ಡ್ ಸೇವೆ, ತಾಂತ್ರಿಕ ಉತ್ಕರ್ಷತೆ, ಹೊಸ ಉತ್ಪನ್ನಗಳು, ಅಂತರಿಕ ಮತ್ತು ಬಾಹ್ಯ ಲೆಕ್ಕಶೋಧನೆ ಇತ್ಯಾದಿ ಮಾಹಿತಿಗಳ ಸ್ಥೂಲವಾದ ಮಾಹಿತಿ ನೀಡಿ 2015-16 ರ ಸಾಲಿನ ಸಾಧನಾ ಉಜ್ವಲತೆಯನ್ನು ಬಣ್ಣಿಸಿದರು.
ಬ್ಯಾಂಕ್ ಗತ ವರ್ಷದಲ್ಲಿ16.45% ಅಭಿವೃದ್ಧಿ ಸಾಧಿಸಿದೆ. 20 ನೂತನ ಶಾಖೆಗಳನ್ನು ಸೇವಾರ್ಪಣೆಗೈದಿದೆ. ಚಿಲ್ಲರ್ ಆ್ಯಪ್ ಸೇವೆ, ಡಿಟಿಹೆಚ್ ಸೇವೆ ಮತ್ತು ಡಾಟಾ ಕಾರ್ಡ್ ಸೇವೆ, ಅಸ್ಸೆಟ್ ಬ್ಯಾಕ್ಡ್ ಲೋನ್, ಬಿಸಿಬಿ ಆಟೋ ಪ್ಲಸ್,, ಬಿಸಿಬಿ ಪುಷ್ಪಕ್ ಪ್ಲಸ್ ಮತ್ತು ಬಿಸಿಬಿ ಮೆಡಿ ಓವರ್ಡ್ರಾಫ್ಟ್ ಸೇವೆಯನ್ನು ಜನತೆಗೆ ನೀಡಿದೆ. ಬ್ಯಾಂಕ್ನ 2015-16 ಕ್ಯಾಲೆಂಡರ್ ವರ್ಷದ ನಿವ್ವಳ ಲಾಭ ಮತ್ತು ಲೆಕ್ಕಪತ್ರಗಳ ವಿವರ, ಗತಸಾಲಿನ ಕಾರ್ಯಚಟುವಟಿಕೆಗಳನ್ನು ಸಭೆಗೆ ತಿಳಿಸಿ ಭಾರತ್ ಬ್ಯಾಂಕ್ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಗ್ರಾಹಕರ ಮತ್ತು ಶೇರುದಾರರ ವಿಶ್ವಾಸಕ್ಕೆ ಪಾತ್ರವಾಗಿದೆ. ಭವಿಷ್ಯತ್ತಿನಲ್ಲೂ ಗ್ರಾಹಕರ ಬಲಶೀಲತೆಗೆ ಭಾರತ್ ಬ್ಯಾಂಕ್ ಬದ್ಧ ಎನ್ನುತ್ತಾ ಈ ಬಾರಿಯೂ ಶೆೇರುದಾರರಿಗೆ ಬ್ಯಾಂಕ್ 15% ಡಿವಿಡೆಂಟ್ ನೀಡಲಿಪ್ಛಿಸಿದೆ ಎಂದು ಜಯ ಸಿ.ಸುವರ್ಣ ಘೋಷಿಸಿದರು.
ಬ್ಯಾಂಕ್ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಸುಖಾಗಮನ ಬಯಸಿ ಬ್ಯಾಂಕ್ನ 2015-16 ಕ್ಯಾಲೆಂಡರ್ ವರ್ಷದ ವಾರ್ಷಿಕ ಕಾರ್ಯಸಾಧನೆಗಳನ್ನು ತಿಳಿಸುತ್ತಾ ಪಾಲುದಾರಿಕ ಬಂಡವಾಳ (ಶೇರ್ ಕ್ಯಾಪಿಟಲ್) 181.66 ಕೋಟಿ, ಕಾಯ್ದಿರಿಸಿದ ಸ್ಥಿರನಿಧಿ (ರಿಝರ್ವ್ ಫಂಡ್) 720.77 ಕೋಟಿ, ಸ್ಥಿರ ಠೇವಣಾತಿ (ಫಿಕ್ಸೆಡ್ ಡಿಪಾಜಿಟ್) 7,277.45 ಕೋಟಿ, ಉಳಿತಾಯ ಠೇವಣಾತಿ (ಸೇವ್ಹಿಂಗ್ ಡಿಪಾಜಿಟ್) 1,124.82 ಕೋಟಿ, ಚಾಲ್ತಿ ಠೇವಣಾತಿ (ಕರೆಂಟ್ ಫಂಡ್) 522.61 ಕೋಟಿ, ಆವರ್ತ ಠೇವಣಾತಿ (ರೆಕರಿಂಗ್ ಡಿಪಾಜಿಟ್) 126.76 ಕೋಟಿ, ಭಾರತ್ ದೈನಂದಿನ ಠೇವಣಾತಿ (ಭಾರತ್ ಡೈಲಿ ಡಿಪಾಜಿಟ್) 66.07 ಕೋಟಿ ಆಗಿದ್ದು ಗತ ಸಾಲಿನಲ್ಲಿ ಒಟ್ಟು 9,117.71 ಕೋಟಿ ವ್ಯವಹಾರ ನಡೆಸಿದೆ. ಸಾಲ ಮತ್ತು ಮುಂಗಡ (ಲೋನ್ ಎಂಡ್ ಎಡ್ವಾನ್ಸಸ್) 6,033.68 ಕೋಟಿ, ನಿಬಿಡ ಆದಾಯ (ಗ್ರೋಸ್ ಇನ್ಕಮ್) 1,092.86 ಕೋಟಿ, ನಿವ್ವಳ ಲಾಭ (ನೆಟ್ ಪ್ರಾಫಿಟ್) ರೂಪಾಯಿ 117.48 ಕೋಟಿ, ಕಾರ್ಯಮಾನ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್) ರೂಪಾಯಿ 10,479.20 ಕೋಟಿ ವ್ಯವಹಾರಿಸಲಾಗಿದೆ. ಅಂತೆಯೇ ಈ ಬಾರಿಯೂ ಲೆಕ್ಕ ಶೋಧನಾ ಶ್ರೇಣೀಕರಣ ಪ್ರಕಾರ (ಆಡಿಟ್ ಕ್ಲಾಸಿಫೀಕೇಶನ್) `ಎ’ ದರ್ಜೆಯ ಸ್ಥಾನದೊಂದಿಗೆ ಧೃಡೀಕೃತಗೊಂಡಿದೆ ಎನ್ನುತ್ತಾ ಸಭಾ ಕಲಾಪವನ್ನು ನಡೆಸಿದರು.
ಬ್ಯಾಂಕ್ನ ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ನಿರ್ದೇಶಕರುಗಳಾದ ಕೆ.ಎನ್ ಸುವರ್ಣ (ಸಾಲ ಸಮಿತಿ ಕಾರ್ಯ ಧ್ಯಕ್ಷ), ಯು.ಎಸ್ ಪೂಜಾರಿ (ಲೆಕ್ಕಪರಿಶೋಧನಾ ಸಮಿತಿ ಕಾರ್ಯಾಧ್ಯಕ್ಷ), ನ್ಯಾಯವಾದಿ ಸೋಮನಾಥ ಬಿ.ಅವಿೂನ್ (ಕಾನೂನು ಮತ್ತು ಸಾಲ ವಸೂಲಿ ಸಮಿತಿ ಕಾರ್ಯ ಧ್ಯಕ್ಷ), ಪುಷ್ಫಲತಾ ಎನ್.ಸಾಲ್ಯಾನ್, ವಾಸುದೇವ ಆರ್.ಕೋಟ್ಯಾನ್, ಎಂ.ಬಿ ಕುಕ್ಯಾನ್, ಜೆ.ಎ ಕೋಟ್ಯಾನ್, ಭಾಸ್ಕರ್ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ರೋಹಿತ್ ಎಂ.ಸುವರ್ಣ, ಹರೀಶ್ಚಂದ್ರ ಜಿ.ಮೂಲ್ಕಿ, ದಾಮೋದರ ಸಿ.ಕುಂದರ್, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ, ಸೂರ್ಯಕಾಂತ್ ಜೆ. ಸುವರ್ಣ, ಅಶೋಕ್ ಎಂ.ಕೋಟ್ಯಾನ್, ಜ್ಯೋತಿ ಕೆ.ಸುವರ್ಣ, ಸಿ.ಟಿ ಸಾಲ್ಯಾನ್, ಅನ್ಬಲಗನ್ ಸಿ.ಹರಿಜನ ವೇದಿಕೆಯಲ್ಲಿ ಆಸೀನರಾಗಿದ್ದರು.
ಬ್ಯಾಂಕ್ ಸದಸ್ಯರುಗಳಾದ ನ್ಯಾ| ಶಶಿಧರ ಕಾಪು, ಸಿಎ| ರಮೇಶ್ ಶೆಟ್ಟಿ, ಪ್ರಕಾಶ್ ಅಗರ್ವಾಲ್, ಕೆ.ಟಿ ರಘುನಾಥ್, ಕಿರೀಟ್ ಪಿ.ಶ್ಹಾ, ಕೃಷ್ಣರಾಜ ಕೋಟ್ಯಾನ್, ಆರ್.ಪಾಂಡ್ಯನ್, ಲಲಿತ್ ಆರ್. ಶ್ಹಾ, ಬಿ.ಜಿ ನಾಯಕ್, ಸುರೇಖಾ ಜಾಧವ್, ಸಿಎ| ಕಾರ್ತಿಕ್ ಐಯ್ಯರ್, ವಿನೋದ್ ಶೆಟ್ಟಿ, ಸಿಎ| ಗಣೇಶ್ ಶೆಟ್ಟಿ, ಜಿ.ಎಂ ಕೋಟ್ಯಾನ್, ರಾಜಾ ವಿ.ಸಾಲ್ಯಾನ್, ಎಂ.ರಾಮಚಂದ್ರನ್, ಉದಯ ಚಿಕ್ಳೆ, ಎನ್.ಎಂ ಸನೀಲ್, ಕೆ.ಹೆಚ್ ಸಹನಿ, ಕೆ.ಎ ಬಂಗೇರ, ಶ್ರೀನಿವಾಸ ಪೂಜಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.
ಮಹಾಸಭೆಯಲ್ಲಿ ಬಿಲ್ಲವ ಜಾಗೃತಿ ಬಳಗದ ಉಪಾಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಅಧ್ಯಕ್ಷ ಎನ್.ಟಿ ಪೂಜಾರಿ, ನಿರ್ದೇಶಕ ಮಹೇಂದ್ರ ಸೂರು ಕರ್ಕೇರ, ಹರೀಶ್ ಜಿ.ಅಮೀನ್, ಲೋನವಲಾ ಮಹಾನಗರ ಪಾಲಿಕೆ ಮೇಯರ್ ಸುರೇಖಾ ಜಾಧವ್, ನಗರ ಸೇವಕ ಶ್ರೀಧರ್ ಎಸ್.ಪೂಜಾರಿ, ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ಒಕ್ಕಲಿಗರ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಂಗಪ್ಪ ಸಿ.ಗೌಡ ಸೇರಿದಂತೆ ನೂರಾರು ಶೇರುದಾರರು, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ ಬ್ಯಾಂಕ್ನ ಜಿಎಂ ನಿತ್ಯಾನಂದ ಡಿ.ಕೋಟ್ಯಾನ್, ಡಿಜಿಎಂಗಳಾದ ಮೋಹನ್ದಾಸ್ ಹೆಜ್ಮಾಡಿ, ವಿದ್ಯಾನಂದ ಕರ್ಕೆರ, ವಿವೇಕ್ ಎನ್. ಶ್ಯಾನ್ಭಾಗ್, ರಘು ಪೂಜಾರಿ, ಸುರೇಶ್ ಎಸ್.ಸಾಲ್ಯಾನ್, ಪ್ರಭಾಕರ್ ಜಿ.ಸುವರ್ಣ, ವಿಶ್ವನಾಥ್ ಜಿ.ಸುವರ್ಣ, ದಿನೇಶ್ ಬಿ.ಸಾಲಿಯಾನ್, ಶೋಭಾ ದಯಾನಂದ್ (ನಿವೃತ್ತ ಜಿಎಂ), ಮತ್ತಿತರ ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಬ್ಯಾಂಕ್ ಅಧಿಕಾರಿ ಯಶೋಧರ ಡಿ.ಪೂಜಾರಿ ಪ್ರಾರ್ಥನೆಯನ್ನಾಡಿದರು. ಸಿಜಿಎಂ ಅನಿಲ್ಕುಮಾರ್ ಆರ್.ಅವಿೂನ್ ಉಪಕಾರ ಸ್ಮರಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಸಮಾಪ್ತಿ ಗೊಂಡಿತು.
ಚಿತ್ರ / ವರದಿ : ರೋನ್ಸ್ ಬಂಟ್ವಾಳ್







