ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕೆಳಗೆ ಸರ್ವಿಸ್ ರಸ್ತೆ ಬದಿ ಹಲವೆಡೆ ಚರಂಡಿ ಬಾಯ್ತೆರೆದು ಅಪಾಯ ಆಹ್ವಾನಿಸುತ್ತಿದ್ದು, ದ್ವಿಚಕ್ರ ಸಹಿತ ವಿವಿಧ ವಾಹನ ಸವಾರರು ಮತ್ತು ಪಾದಚಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.ಈ ಹಿಂದೆ ಬಾಯ್ತೆರೆದ ಚರಂಡಿ ಬಳಿ ಹಾಕಿದ್ದ ಮಣ್ಣಿನ ರಾಶಿಯನ್ನು ಬಂಟ್ವಾಳ ಪುರಸಭೆ ವತಿಯಿಂದ ಶುಕ್ರವಾರ ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಇದರಿಂದಾಗಿ ಚರಂಡಿ ಬಾಯ್ತೆರೆದು ದ್ವಿಚಕ್ರ ಮತ್ತಿತರ ವಾಹನ ಚಕ್ರ ಸಿಲುಕಿಕೊಳ್ಳುವುದರ ಜೊತೆಗೆ ಪಾದಚಾರಿಗಳೂ ಚರಂಡಿ ಒಳಗೆ ಕುಸಿದು ಬೀಳುವ ಬಗ್ಗೆ ಆತಂಕಕ್ಕೀಡಾಗಿದ್ದಾರೆ.ಈ ಚರಂಡಿಗೆ ಇದೀಗ ಯಾವುದೇ ತಡೆಯಿಲ್ಲದ ಪರಿಣಾಮ ರಸ್ತೆ ದಾಟುವ ಧಾವಂತದಲ್ಲಿರುವ ಪಾದಚಾರಿಗಳು ಕಾಲು ಜಾರಿ ಬೀಳುತ್ತಿರುವ ಬಗ್ಗೆ ಆತಂಖ ವ್ಯಕ್ತಪಡಿಸಿದ್ದಾರೆ.ಇನ್ನೊಂದೆಡೆ ಮೇಲ್ಸೇತುವೆಯಡಿ ವಾಹನ ನಿಲುಗಡೆಗೊಳಿಸುತ್ತಿರುವ ರಿಕ್ಷಾ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರ ಒಂದು ಚಕ್ರ ಸಿಲುಕಿಕೊಂಡರೂ ವಾಹನ ಉರುಳಿ ಬೀಳುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಇಲ್ಲಿನ ಹೆದ್ದಾರಿ ಮೇಲ್ಸೇತುವೆಯಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗದೆ ಕೆಳ ರಸ್ತೆಯಲ್ಲಿ ಸಂಚರಿಸುವ ವಾಹನ ಮತ್ತು ಪಾದಚಾರಿಗಳಿಗೆ ಹಾರಿ ಕೆಸರು ನೀರಿನ ಅಭಿಷೇಕವಾಗುತ್ತಿದೆ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಒಂದಿಲ್ಲೊಂದು ನೆಪವೊಡ್ಡಿ ವಿಸ್ತ್ತರಣೆಗೊಳ್ಳದಿರುವ ಸರ್ವಿಸ್ ರಸ್ತೆ ಡಾಂಬರು ಕೂಡಾ ಬಹುತೇಕ ಎದ್ದು ಹೋಗಿದೆ. ಇಲ್ಲಿನ ಸರ್ವಿಸ್ ರಸ್ತೆ ಬದಿ ಚರಂಡಿಗೆ ಅಳವಡಿಸಿರುವ ಬಹುತೇಕ ಕಾಂಕ್ರೀಟು ಮುಚ್ಚಳ ಅಲ್ಲಲ್ಲಿ ಒಡೆದು ಹೋಗಿ ಬಾಯ್ತ್ತೆರೆದು ಅಪಾಯ ಆಹ್ವಾನಿಸುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ ಮತ್ತು ಜನಪ್ರತಿನಿಧಿಗಳು ಕಣ್ಣು-ಕಿವಿ ಇದ್ದರೂ ಜಾಣ ಕುರುಡ ಮತ್ತು ಕಿವುಡರಂತೆ ವರ್ತಿಸುತ್ತಿದ್ದಾರೆ ಎಂದು ಇಲ್ಲಿನ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10btl-Honda

10btl-Honda-1
-ಯೇಶನ್ ವತಿಯಿಂದ ಇಲ್ಲಿನ ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಇದೇ 19ರಂದು ಬೆಳಿಗ್ಗೆ ದಕ್ಷಿಣ ಕನ್ನಡ ಮಾತ್ರವಲ್ಲದೆ ಉಡುಪಿ ಮತ್ತು ಕಾಸರಗೋಡು ಸಹಿತ ಅವಿಭಜಿತ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ (‘ಬಿಸಿಎ ಟ್ರೋಫಿ-2016’) ನಡೆಯಲಿದೆ.
ಏಳು, 10, 13, 16 ವರ್ಷಕ್ಕಿಂತ ಕೆಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ವಿಜೇತರಿಗೆ 5 ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುತ್ತದೆ.
ಉಳಿದಂತೆ ಮುಕ್ತ ವಿಭಾಗ ಮತ್ತು ಮಹಿಳೆಯರ ಮುಕ್ತ ವಿಭಾಗದಲ್ಲಿ 10 ಮತ್ತು ಐದು ಟ್ರೋಫಿ ಸಹಿತ ನಗದು ಬಹುಮಾನ ಇದೆ.
ಅಂದು ಬೆಳಿಗ್ಗೆ ನಡೆಯುವ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ವಕೀಲ ಅಶ್ವನಿ ಕುಮಾರ್ ರೈ, ನಿವೃತ್ತ ತಹಶೀಲ್ದಾರ್ ಮೋಹನ ರಾವ್, ಉದ್ಯಮಿ ಜಯಚಂದ್ರ ಬೊಳ್ಚಾರ್, ಚೆಸ್ ಕ್ರೀಡಾಳು ಶಾಬ್ದಿಕ್ ವರ್ಮಾ, ಮಂಗಳೂರು ಡೇರಿಕ್ ಚೆಸ್ ಶಾಲೆಯ ಡೇರಿಕ್ ಪಿಂಟೊ ಭಾಗವಹಿಸುವರು. ಅಂದು ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ನಿವತ್ತ ಯುವಜನ ಸೇವಾ ಅಧಿಕಾರಿ ಚಂದ್ರಹಾಸ ಅಡಪ, ಯಕ್ಷಗಾನ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ, ಸರಪಾಡಿ ಅಶೋಕ್ ಕುಮಾರ್ ಶೆಟ್ಟಿ, ಮಂಗಳೂರು ಡೇರಿಕ್ ಚೆಸ್ ಶಾಲೆಯ ಪ್ರಸನ್ನ ರಾವ್ ಮತ್ತಿತರ ಗಣ್ಯು ಭಾಗವಹಿಸುವರು.
ಹೆಚ್ಚಿನ ಮಾಹಿತಿಗೆ ಆಸಕ್ತರು ದಂಡೆ ರಾಮಚಂದ್ರ ಶೆಟ್ಟಿ-9448011388 ಮತ್ತು ಚಂದ್ರಶೇಖರ ಭಂಡಾರಿ-9480253074 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
—

By Suddi9

Leave a Reply

Your email address will not be published. Required fields are marked *