ಬೆಳ್ತಂಗಡಿ: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ದಾನಿಗಳ ನೆರವಿನಿಂದ ಸುಮಾರು ರೂ. 2.15 ಲಕ್ಷ ವೆಚ್ಚದಲ್ಲಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ಶಿರ್ಲಾಲು ಎಂಬಲ್ಲಿ ಸಾರ್ವಜನಿಕ ಬಾವಿಯನ್ನು ಲೋಕಾರ್ಪಣೆ ಮಾಡಲಾಯಿತು. ಜಮಾಅತೆ ಇಸ್ಲಾಮಿ ಹಿಂದ್, ಮಂಗಳೂರು ಶೂರಃ ಸದಸ್ಯರಾದ ಜ. ಸಈದ್ ಇಸ್ಮಾಯೀಲ್ ರವರು ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ನೀರು ಇಂದು ಅತ್ಯಮೂಲ್ಯವಾದ ಸಂಪತ್ತಾಗಿದೆ. ಜನರ ದೈನಂದಿನ ಬಳಕೆಗೆ ಬೇಕಾಗುವ ನೀರನ್ನು ಒದಗಿಸುವುದು ಅತ್ಯಂತ ಪುಣ್ಯದಾಯಕ ಕೆಲಸವಾಗಿದೆ. ಅದೇ ಸೇವೆಯನ್ನು ಪ್ರವಾದಿಯವರ ಅನುಯಾಯಿಗಳಾದ ನಾವೆಲ್ಲರೂ ಮಾಡಬೇಕಾಗಿದೆ. ಸಾರ್ವಜನಿಕ ಬಾವಿಗಳು ಸೌಹಾರ್ದದ ಕೇಂದ್ರವಾಗಿದೆ. ಸಾರ್ವಜನಿಕ ಬಾವಿಗಳಿಂದ ಯಾವುದೇ ಜಾತಿ, ಧರ್ಮ, ಭೇದವ ಮಾಡದೆ ಎಲ್ಲರಿಗೂ ನೀರು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಈ ಪುಣ್ಯ ಕೆಲಸಕ್ಕೆ ಶ್ರಮಿಸಿದ ಪ್ರತಿಯೋರ್ವರಿಗೂ ದೇವರು ಪ್ರತಿಫಲ ನೀಡಲಿ ಎಂದು ಹೇಳಿದರು.
ಈ ಸಂದರ್ಭ ಅಬ್ದುಲ್ ರಹೀಂ ಉಸ್ತಾದ್, ಸಮಾಜ ಸೇವಾ ಘಟಕದ ಸಿದ್ದೀಕ್ ಜಕ್ರಿಬೆಟ್ಟು, ಶಂಶೀರ್ ಮೆಲ್ಕಾರ್, ಅಯ್ಯೂಬ್ ಅಳದಂಗಡಿ, ಅಬ್ಬಾಸ್ ಶಿರ್ಲಾಲು ಉಪಸ್ಥಿತರಿದ್ದರು.


