ಮುಂಬಯಿ: ಜೂ.03: ಬರುವ ಡಿಸೆಂಬರ್ 9 ರಿಂದ 13 ರ ತನಕ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಬಗ್ಗೆ ಆಯನೊ ಕೂಟದ ಸದಸ್ಯರು ಶ್ರೀ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರನ್ನು ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

tt1

ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಸ್ವಾಮೀಜಿ ಅವರು ಕಾರ್ಯಕ್ರಮವು ಯಶಸ್ವಿಯಾಗಿ ನಾಡಿನಲ್ಲಿ ಜಾತಿ ಮತ ಭಾಷಾ ಸಾಮರಸ್ಯ ಮೆರೆಯಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ತುಳುವೆರೆ ಆಯನೊ ಕೂಟದ ಅಧ್ಯಕ್ಷ ಡಾ| ಶ್ರೀನಿಧಿ ಸರಳಾಯ, ಪ್ರೊ. ಶ್ರೀನಾಥ್ ಕಾಸರಗೋಡು, ಆಯನೊ ಕೂಟದ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿ ಕೃಷ್ಣ ಡಿ. ಬೆಳಿಂಜೆ, ರಾಘವೇಂದ್ರ ಅಮ್ಮಣ್ಣಾಯ, ನವೀನ್ ರೈ ಪುತ್ರಕಳ, ಹರೀಶ್ ಬದಿಯಡ್ಕ, ಹರ್ಷ ರೈ ಪುತ್ರಕಳ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *