ಬಂಟ್ವಾಳ:  ನಗರದಲ್ಲಿ ಹೆಚ್ಚುತ್ತಿರುವ  ಕಳವು , ಸರಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲಿ ಬಂಟ್ವಾಳ ನಗರ ಪೋಲಿಸರು ದೇವಸ್ಥಾನ , ದೈವಸ್ತಾನ, ಬ್ಯಾಂಕುಗಳು , ವಾಣಿಜ್ಯ ಸಂಕೀರ್ಣ ,ಜ್ಯುವೆಲ್ಲರಿ ಮಳಿಗೆಗಳಿಗೆ ಸೈರನ್, ಸಿ.ಸಿ ಕೆಮರಾ ಅಳವಡಿಸುವುದರ ಜೊತೆಗೆ ಕಾವಲುಗಾರರನ್ನು ನೇಮಿಸಬೇಕು ಎಂದು ಇನ್ಸ್ ಪೆಕ್ಟರ್ ಬೆಳ್ಳಿಯಪ್ಪ ಇಂದು ನಗರ ಠಾಣೆಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.  DSC05016

ಸಾರ್ವಜನಿಕರು ದೇವಸ್ಥಾನದ ಆಡಳಿತ ಕಮಿಟಿಯ ಪದಾಧಿಕಾರಿಗಳು , ಜುವೆಲ್ಲರಿ ಅಂಗಡಿಯ ಮಾಲಕರು ಮತ್ತು ಬಾಂಕ್ , ವಾಣಿಜ್ಯ ಸಂಕಿರ್ಣದ ಮಾಲಕರಿಗೆ ಬುಧವಾರ ನಡೆದ ಸಭೆಯಲ್ಲಿ  ಸೂಚನೆ ನೀಡಿದ್ದಾರೆ. ಹಾಗೆಯೇ ಛಾವಣಿಯನ್ನು ಭದ್ರಗೊಳಿಸಲು ಕ್ರಮ ಕೈಗೊಳ್ಳುವಂತೆಯೂ  ಸೂಚಿಸಲಾಗಿದೆ.ಸಾರ್ವಜನಿಕರು ತಮ್ಮ ಅಮೂಲ್ಯ ವಸ್ತುಗಳನ್ನು ತಮ್ಮ ಆಭರಣಗಳನ್ನು ಸೂಕ್ತವಾದ ಬ್ಯಾಂಕ್ ಲಾಕರ್ ನಲ್ಲಿರಿಸಬೇಕು. ಮನೆಗೆ ಬೀಗ ಹಾಕಿ ಪ್ರಯಾಣಕ್ಕೆ ತೆರಳುವವೇಳೆ ಅಕ್ಕಪಕ್ಕದ ಮನೆಯವರಲ್ಲಿ  ಮತ್ತು ಸ್ಥಳೀಯ ಪೋಲಿಸ್ ಠಾಣೆಗೂ ಮಾಹಿತಿ ನೀಡಬೇಕು. ವಾಹನಗಳಲ್ಲಿ  ಸರ,ಬ್ಯಾಗ್ ಕಳ್ಳತನದ ಬಗ್ಗೆ ಎಚ್ಚರಿಕೆ ನೀಡುವ ಫಲಕವನ್ನು ಅಳವಡಿಸಬೇಕೆಂದು  ಬೆಳ್ಳಿಯಪ್ಪ ತಿಳಿಸಿದರು.ಈ ಸಂರ್ಭದಲ್ಲಿ  ನಗರಠಾಣೆಯ ಎಸ್.ಐ ನಂದಕುಮಾರ್ ಉಪಸ್ಥಿತರಿದ್ದರು. ಬಳಿಕ ಸಾರ್ವಜನಿಕರಿಗೆ ಅಪರಾದ ತಡೆಯ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವ ಸೂಚನಾ ಕರಪತ್ರವನ್ನು ನೀಡಲಾಯಿತು .

By suddi9

Leave a Reply

Your email address will not be published. Required fields are marked *