ಬಂಟ್ವಾಳ: ಬೆಂಗಳೂರಿಗೆ ಹೋದ ವಿವಾಹಿತ ಮಹಿಳೆಯೋರ್ವಳು ವಾಪಾಸು ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಲೊರೆಟ್ಟೋ ಬಾರೆಕಾಡು ನಿವಾಸಿ ರೋನಾಲ್ಡ್ ಡಿ’ಕ್ರೂಜ್ ಅವರ ಪತ್ನಿ ಜೆನಿಫರ್ ನಾಪತ್ತೆಯಾದ ಮಹಿಳೆ. ಸುಮಾರು 5ವರ್ಷಗಳ ಹಿಂದೆ ಮಡಿಕೇರಿಯ ಸೋಮವಾರ ಪೇಟೆಯ ಪೆಟ್ರಿಕ್ ಪಿಂಟೋ ಎಂಬವರ ಮಗಳು ಜೆನ್ನಿಫರ್ ಅವರನ್ನು ರೋನಾಲ್ಡ್ ಗುರು ಹಿರಿಯವರ ಒಪ್ಪಿಗೆಯಂತೆ ಮದುವೆಯಾಗಿದ್ದರು.
DSC_3355
ಈಗ ಅವರಿಗೆ 4 ವರ್ಷದ ಹೆಣ್ಣು ಮಗುವಿದ್ದು ಸಾಂಸರಿಕವಾಗಿ ಅವರು ಅನ್ಯೋನ್ಯವಾಗಿದ್ದರು. ಇತ್ತೀಚೆಗೆ ಅವರು ನಾನು ಬೆಂಗಳೂರಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳುತ್ತಿದ್ದರು. ಶುಕ್ರವಾರ ಮದ್ಯಾಹ್ನ 2.30 ವೇಳಗೆ ಮನೆಯಲ್ಲಿ ಯಾರು ಇಲ್ಲದಿದ್ದಾಗ ಮಗುವನ್ನು ಮನೆಯಲ್ಲಿ ಬಿಟ್ಟು ಬಟ್ಟೆ ಮತ್ತು ಚಿನ್ನವನ್ನು ಹಿಡಿದುಕೊಂಡು ಹೋಗಿದ್ದಾರೆ. ಅವರು ಹಿಂದೆ ಹೇಳಿದಂತೆ ಬೆಂಗಳೂರಿಗೆ ತೆರಳಿರಬೇಕು, ಅವರನ್ನು ಪತ್ತೆ ಮಾಡಿಕೊಡಬೇಕೆಂದು ಪತಿ ರೋನಾಲ್ಡ್ ಠಾಣೆಗೆ ದೂರು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *