ಬಂಟ್ವಾಳ: ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾದ ಘಟನೆ ಬಿ. ಮೂಡ ಗ್ರಾಮದ ಪರಾರಿ ಎಂಬಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಇಲ್ಲಿನ ನಿವಾಸಿ ಯು ಬಾಬು ಬೆಳ್ಚಡ ಎಂಬವರ ಮನೆಗೆ ಸಿಡಿಲು ಅಪ್ಪಳಿಸಿದ್ದು ಲಕ್ಷಂತರ ರುಪಾಯಿ ನಷ್ಟ ಸಂಭವಿಸಿದೆ.


ಶನಿವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಏಕಾಏಕಿ ಸಿಡಿಲು ಅಪ್ಪಳಿಸಿದೆ. ಮನೆಯ ಹಿಂಬಾಗದ ಶೌಚಾಗೃಹಕ್ಕೆ ಅಪ್ಪಳಿಸಿದ ಸಿಡಿಲು ಅಲ್ಲಿಂದ ರಂಧ್ರಕೊರೆದು ಅಲ್ಲೆ ಇದ್ದ ಅಲ್ಯೂಮಿನಿಯಂ ಕೊಡಪಾನವನ್ನೂ ಜಜ್ಜಿ ತೂತೂ ಗೊಳಿಸಿದೆ. ಮನೆಯ ಭಾಗಶಃ ಗೋಡೆಗಳು ಸಿಡಿಲಿನ ಬಡಿತಕ್ಕೆ ಬಿರುಕು ಬಿಟ್ಟಿದ್ದು ವಿದ್ಯುತ್ ಸಲಕರಣೆಗಳು ಸುಟ್ಟು ಕರಕಲಾಗಿದೆ. ಸ್ವಿಚ್ಬೋಡರ್್, ಮೀಟರ್ ಬೋಡರ್್ಗಳು ಗೋಡೆಯಿಂದ ಕಿತ್ತು ಬಂದಿದೆ. ಕಿಟಿಕಿಯ ಗಾಜು ಪುಡಿಯಾಗಿದೆ. ಈ ವೇಳೆಮನೆಮಂದಿಯೆಲ್ಲಾ ಗಾಢ ನಿದ್ರೆಯಲ್ಲಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ನಡೆದ ಮನೆಗೆ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಸದಸ್ಯ ಸದಾಶಿವ ಬಂಗೇರ ಭೇಟಿ ನೀಡಿದ್ದರು.
