ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಬದಲಾವಣೆ ಅವಶ್ಯ-ಸಚಿವ ರೈ
ಬಜಪೆ:ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಪೂರಕ ಬದಲಾವಣೆಗಳು ಅವಶ್ಯ ಪ್ರಕೃತಿಯ ಜೊತೆ ಜೊತೆಗೆ ಕಲಿಕೆಯನ್ನು ರೂಪಿಸಿದಾಗ ಸ್ವಾಸ್ಥ್ಯಪೂರ್ಣ ಬದುಕಿನ ನೆಗಟ್ಟು ಗಟ್ಟಿಯಗುತ್ತದೆ.ಕೇವಲ ಅಂಕ ಅಧಾರಿತ ಪುಸ್ತಕಗಲನ್ನಷ್ಟೆ ನೆಚ್ಚಿಕೊಳ್ಳದೆ ಸಾಂಪ್ರಾದಾಯಿಕತೆಯ ನೆನೆವರಿಕೆಯೊಂದಿಗೆ ಹೊಸತನದ ಶಿಕ್ಷಣ ನೀಡುವ “ಪನಾ” ಕಾಲೇಜಿನ ದ್ಯೇಯ ನಿಜಕ್ಕೂ ಪ್ರೋತ್ಸಾಹಕ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆವರು ಹೇಳಿದರು.
ಅವರು ಭಾನುವಾರ ಮಂಗಳೂರು ತಾಲೂಕಿನ ಬಜಪೆ ಕೊಲಂಬೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಪನಾ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

DSC_9892

DSC_9869

DSC_9889

 

DSC_9910

DSC_9918

DSC_9920


DSC_9940

DSC_9941

DSC_9943

DSC_9950

DSC_9953
ಗುರುಪುರ ವಜ್ರದೇಹಿ ಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಪನಾ ಕಾಲೇಜು ಕ್ಯಾಂಪಸ್ ಪ್ರಾರಂಬೋತ್ಸವವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪನಾ ಎಜುಕೇಶನ್ ಟ್ರಸ್ಟ್‍ನ ಪ್ರಮುಖರಾದ ಡಾ.ಪ್ರಸಾದ್ ಹೆಗ್ಡೆ ಅವರು ದಿಕ್ಸೂಚಿ ಭಾಷಣಗೈದು ಕಾಲೇಜಿನ ಶಿಕ್ಷಣ ಪದ್ದತಿ, ವ್ಯವಸ್ಥೆ,ಸವಲತ್ತುಗಳು ಹಾಗೂ ವಿಶೇಷತೆಗಳನ್ನು ವಿವರಿಸಿದರು.”ಪನಾ ಸಂಸ್ಥೆ ಕೇವಲ ಸಾಮಾಜಿಕ ನಿಲುವು ತಳಿಯದೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತದೆ. ಬಜಪೆ ಪರಿಸರದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸ್ಕಾಲರ್ ಶಿಫ್ ಹಾಗೂ ವಿಶೇಷ ಶುಲ್ಕ ಪಾವತಿಯಲ್ಲಿ ವಿನಾಯಿತಿ ಇದೆ.ಪ್ರಾಕೃತಿ ಚಿಂತನೆಯ ಒಂದಂಶವಾಗಿ ಕಾಲೇಜಿನ ಸುತ್ತಣ ಪರಿಸರವನ್ನು ಪಕ್ಷಿಧಾಮಕ್ಕೆ ಸೂಕ್ತವಾಗುವ ರೀತಿಯಲ್ಲಿ ವಲಸೆ ಹಕ್ಕಿಗಳು ನೆಲೆಸುವ ಮಾದರಿಯಲ್ಲಿ ಹಸಿರುವನ ನಿರ್ಮಿಸಲಾಗುತ್ತದೆ. ಜತೆಗೆ ಪನಾ ಸಂಸ್ಥೆಯ ಪೂರ್ತಿ ವ್ಯವಸ್ಥೆಗೆ ಸೋಲಾರ್ ವಿದ್ಯುದ್ದಿಕರಣ ಅಳವಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು. ಇದೇ ಸಂದರ್ಭ ಕಾಲೇಜಿನ ನಾನಾ ವಿಭಾಗಗಳ ಕಾರ್ಯಾಗಾರಗಳು ಹಾಗೂ ವಿಶೇಷ ವ್ಯವಸ್ಥೆಗಳ ದ್ರಶ್ಯ ಪ್ರಾತ್ಯಕ್ಷಕೆ ಪ್ರಸ್ತುತ ಪಡಿಸಲಾಯಿತು. ಟ್ರಸ್ಟ್‍ನ ಡಿಸಿಪ್ಲಿನರಿ ಯುನಿರ್ವಸಿಟಿಯ ಉಪಕುಲಪತಿ ಡಾ.ದರ್ಶನ್ ಶಂಕರ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್‍ಮ ಸಮಿತ್ ವರ್ಮಾ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಕಂದಾವರ ಗ್ರಾ.ಪಂ.ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ, ಪನಾ ಸಂಸ್ಥೆಯ ಉಪಾಧ್ಯಕ್ಷ ಶ್ಯಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಉಷಾ ರಾವ್ ಸ್ವಾಗತಿಸಿದರು. ಅದಿತಿ ಶರ್ಮಾ ಪ್ರಾರ್ಥಿಸಿದರು.ರಾಮ್‍ದಾಸ್ ಆರ್ಯ ವಂದಿಸಿದರು.ರಿಜೋ ಜಾನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *