ಬಂಟ್ವಾಳ: ಮುಡಿಪು ಚಿರಾಯು ಕ್ಲಿನಿಕ್‍ನ ವೈದ್ಯ ಡಾ.ನರೇಂದ್ರ ಅವರಿಗೆ ಗ್ರಾಮೀಣ ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಅಪ್ನಾದೇಶ್ ಹಾಗೂ ಚಿತ್ತಾರ ಬಳಗದ ವತಿಯಿಂದ ನೀಡಲಾಗುವ “ಅಪ್ನಾದೇಶ್ ಚಿತ್ತಾರ” ಪ್ರಶಸ್ತಿಯನ್ನು ಅಪ್ನಾದೇಶ್ ಸಂಸ್ಥಾಪಕರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಭರತ್‍ಲಾಲ್ ಮೀನಾ ಇತ್ತೀಚೆಗೆ ಮುಡಿಪುನಲ್ಲಿ ಜರಗಿದ ಸಮಾರಂಭದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಜನ ಶಿಕ್ಷಣ ಟ್ರಸ್ಟ್‍ನ ನಿರ್ದೇಶಕರಾದ ಶೀನ ಶೆಟ್ಟಿ, ಕೃಷ್ಣಮೂಲ್ಯ,ಚಿತ್ತಾರ ಬಳಗದ ಚಂದ್ರಶೇಖರ ಪಾತೂರು, ಶ್ರೀಮತಿ ಇಂದಿರಾ ನರೇಂದ್ರ ಮೊದಲಾದವರು ಉಪಸ್ಥಿತರಿದ್ದರು.

