ಬಂಟ್ವಾಳ :ಮಂಚಿ-ಕುಕ್ಕಾಜೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ 27 ರಂದು ಸಂಜೆ 7.00ಗಂಟೆಗೆ ಪೂಜ್ಯ ಮಾಣಿಲ ಶ್ರೀ ಗಳ ಮಾರ್ಗದರ್ಶನದಲ್ಲಿ ಕಟೀಲು ಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರ ನೇತೃತ್ವದಲ್ಲಿ ವೇ/ಮೂ/ಶ್ರೀ ರಾಮಚಂದ್ರ ಕುಂಜಿತ್ತಾಯರಿಂದ ನಡೆಯುವ ನಾಗತನುಪ್ರಸನ್ನ ಪೂಜೆ – ನಾಗದರ್ಶನ ಸೇವೆ ಮತ್ತು ವಾರ್ಷಿಕ ಪ್ರತಿಷ್ಟಾ ಕಾರ್ಯಕ್ರಮಕ್ಕೆ ಸಂಬಂದಿಸಿದ ಆಮಂತ್ರಣ ಪತ್ರವನ್ನು ದೇವಸ್ಥಾನದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಬಿಡುಗಡೆಗೊಳಿಸಿ ಸರ್ವ ಭಕ್ತ ಬಂಧುಗಳ ಸಹಕಾರವನ್ನು ಕೋರಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿಗಳು , ಭಜನಾ ಮಂಡಳಿ ಅಧ್ಯಕ್ಷರು-ಸದಸ್ಯರು ಅನೇಕ ಮಂದಿ ಭಕ್ತರು ಭಾಗವಹಿಸಿದ್ದರು 
