ಬಂಟ್ವಾಳ : ಮಂಗಳಾ ಫ್ರೆಂಡ್ಸ್ ಸರ್ಕಲ್ (ರಿ) ಅಲೆತ್ತೂರು ಬಿ.ಸಿ.ರೋಡ್ ಇದರ 34ನೇ ವಾರ್ಷಿಕೋತ್ಸವವು ಮಂಗಳಾ ಭವನ ಅಲೆತ್ತೂರಿನಲ್ಲಿ ಜರಗಿತು. ದೈವ ಪಾತ್ರಿ ಶೇಖರ್ ರವರನ್ನು ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ನೇಮಿರಾಜ ಶೆಟ್ಟಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯೆ ಸುಗುಣಾ ಕಿಣಿ, ಪರಮೇಶ್ವರ ಶೆಟ್ಟಿ ಚಾವಡಿಮನೆ , ಕೈಕುಂಜೆ ಶ್ರೀದೇವಿ ಫ್ರೆಂಡ್ಸ್ ಅಧ್ಯಕ್ಷ ಕಿಶೋರ್ ಕುಮಾರ್ , ಕೈಕಂಬ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ ಸದಾಶಿವ, ಅಲೆತ್ತೂರು ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ , ಮಂಗಳಾ ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಭಾಸ್ಕರ ಕುಲಾಲ್ , ಕಾರ್ಯದರ್ಶಿ ಚಂದ್ರಪ್ರಕಾಶ್, ಉಪಾಧ್ಯಕ್ಷ ಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಗಿರಿಧರ್ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಸ್ಥಳೀಯ ಪ್ರತಿಭೆ ಗಳಿಂದ ವಿವಿದ ವಿನೋದಾವಳಿ , ಸಾಂಸ್ಕøತಿಕ ಕಾರ್ಯಕ್ರಮ ಜರಗಿತು.

 

KAR_3947

By suddi9

Leave a Reply

Your email address will not be published. Required fields are marked *