ಬಂಟ್ವಾಳ: ದ.ಕ.ಜಿಲ್ಲಾ ಪಂ.ಮಂಗಳೂರು ಮತ್ತು ತಾ.ಪಂ.ಬಂಟ್ವಾಳ ಇದರ ವತಿಯಿಂದ ರಾಷ್ಟ್ರೀಯ ಪಂ.ರಾಜ್ ದಿನಾಚರಣೆಯ ಅಂಗವಾಗಿ ಮುಖ್ಯ ಮಂತ್ರಿಯವರಿಂದ ಗ್ರಾ.ಪಂ.ಸದಸ್ಯರಿಗೆ,ತಾ.ಪಂ.ಸದಸ್ಯರಿಗೆ ಮತ್ತು ಜಿಲ್ಲಾ ಪಂ. ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ವೀಡಿಯೋ ಸಂವಾದ ಕಾರ್ಯಕ್ರಮ ತಾ.ಪಂ.ಬಂಟ್ವಾಳ ಕಚೇರಿಯಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಮತ್ತು ಗ್ರಾ.ಪಂ.ತಾ.ಪಂ.ಸದಸ್ಯ ಮತ್ತು ಜಿಲ್ಲಾ ಪಂ. ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.



